ಇಲಾಖೆಗೆ ಪ್ರತ್ಯೇಕ ಕಾರ್ಯದರ್ಶಿ ನೇಮಕ ಮಾಡಿ

VALMIKI NAYAK SANGA PRESS MEET (1)
Published on

ರಾಯಚೂರು: ಸಮಾಜ ಕಲ್ಯಾಣ ಇಲಾಖೆಯಿಂದ ಬೇರ್ಪಡಿಸಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯನ್ನು ರಚನೆ ಮಾಡಿ ಮೂರು ವರ್ಷಗಳು ಕಳೆದರೂ ಪ್ರಧಾನ ಕಾರ್ಯದರ್ಶಿಯನ್ನು ನೇಮಕ ಮಾಡಲಾಗಿಲ್ಲ. ವಾಲ್ಮೀಕಿ ಜಯಂತಿಯೊಳಗೆ ಕಾರ್ಯದರ್ಶಿ ನೇಮಕ ಮಾಡಬೇಕು ಎಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಒತ್ತಾಯಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಅನೇಕ ವರ್ಷಗಳ ಹೋರಾಟದ ಲವಾಗಿ ಪ್ರತ್ಯೇಕ ಇಲಾಖೆಯನ್ನು ರಚನೆ ಮಾಡಿ ಪ್ರತಿವರ್ಷ ಪ್ರತ್ಯೇಕ ಬಜೆಟ್ ಮೀಸಲಿಡಲಾಗುತ್ತಿದೆ. ಆದರೆ ಪ್ರತ್ಯೇಕ ಕಾರ್ಯದರ್ಶಿಯಿಲ್ಲದ ಕಾರಣ ಯೋಜನೆಗಳು ಜನರಿಗೆ ತಲುಪಲು ವಿಳಂಬವಾಗುತ್ತಿದೆ ಎಂದರು.
ಯಾವುದೇ ಕೆಲಸ ಕಾರ್ಯಗಳಿದ್ದರೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯ ಅಗತ್ಯವಿದ್ದು, ಇದರಿಂದ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿ ಪರಿಹಾರ ಮತ್ತು ಮೃತ ಕುಟುಂಬಕ್ಕೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಜತೆಗೆ ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಯೋಜನೆಗಳು ಜನರಿಗೆ ತಲುಪಿಸಲು ವಿಳಂಬವಾಗುತ್ತಿದೆ.
ಇಲಾಖೆಗೆ ಪ್ರತ್ಯೇಕ ಪ್ರಧಾನ ಕಾರ್ಯದರ್ಶಿಯಿದ್ದಾಗ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಸಲು ಸಾಧ್ಯವಾಗುತ್ತಿದ್ದು, ವಾಲ್ಮೀಕಿ ಜಯಂತಿಯೊಳಗೆ ಇಲಾಖೆಗೆ ಪ್ರತ್ಯೇಕ ಕಾರ್ಯದರ್ಶಿಯನ್ನು ನೇಮಕ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಎನ್.ರಘುವೀರ ನಾಯಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಯಕ, ಪದಾಕಾರಿಗಳಾದ ಈರಣ್ಣ ನಾಯಕ, ರಾಮಕೃಷ್ಣ ನಾಯಕ, ರಮೇಶ ನಾಯಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net