ಮಹಾಲಿಂಗಪುರಕ್ಕೆ ಕಾಯಂ ತಲಾಟಿ ನೇಮಿಸಿ

Appoint a permanent Talati for Mahalingapur
ಮಹಾಲಿಂಗಪುರದ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶೇಖರ ಅಂಗಡಿ ಭೇಟಿ ನೀಡಿದರು. ಮಹಾಲಿಂಗ ಶಿವಣಗಿ, ಮಹಮದ್ ಐನಾಪುರ ಮತ್ತಿತರರಿದ್ದಾರೆ.
Published on

ಮಹಾಲಿಂಗಪುರ: ಪಟ್ಟಣದಲ್ಲಿ 94 ಸಿಸಿ ಅಡಿಯಲ್ಲಿ 740 ರಲ್ಲಿ 520 ನಿವೇಶನಗಳ ಹಕ್ಕುಪತ್ರ ನೀಡಲಾಗಿದ್ದು, ಉಳಿದಂತೆ ಕೆಂಗೇರಿಮಡ್ಡಿಯ 220 ಲಾನುಭವಿಗಳ ಹಕ್ಕುಪತ್ರ ನೀಡಲು ಸ್ಥಳ ಪರಿಶೀಲನೆ ಮತ್ತು ಚಕಬಂದಿ ಕಾರ್ಯ ಪೂರ್ಣವಾಗಬೇಕಿದೆ. ಆದರೆ, ಕಾಯಂ ತಲಾಟಿ ಇಲ್ಲದ್ದರಿಂದ ಪರಿಶೀಲನೆ ಕಾರ್ಯ ವಿಳಂಬವಾಗುತ್ತಿದ್ದು, ಕೂಡಲೇ ಕಾಯಂ ತಲಾಟಿಯನ್ನು ನೇಮಿಸಬೇಕೆಂದು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶೇಖರ ಅಂಗಡಿ ಒತ್ತಾಯಿಸಿದ್ದಾರೆ.

ಪಟ್ಟಣದ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಗುರುವಾರ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಲಾಟಿ ನೇಮಕವಿಲ್ಲದೆ, ಸಕಾಲಕ್ಕೆ ಅಗತ್ಯ ಕಾಗದ ಪತ್ರಗಳು ದೊರಕದೆ ಜನರು ಪರದಾಡುತ್ತಿದ್ದಾರೆ. ಈ ಹಿಂದೆ ಇದ್ದ ತಲಾಟಿ ಹೊಸಮನಿ ಬೇರೆಡೆ ವರ್ಗಾವಣೆಯಾಗಿ ಹೋದ ನಂತರ ಕಚೇರಿಗೆ ಕಾಯಂ ತಲಾಟಿ ನೇಮಕವಾಗಿಲ್ಲ. ಈ ಸಮಸ್ಯೆ ನೀಗಿಸಲು ಇನ್‌ಚಾರ್ಜ್ ಆಗಿ ಮಂಜುನಾಥ ನೀಲನ್ನವರ ನೇಮಿಸಲಾಗಿದ್ದು, ಸಮೀಪದ ಯರಗಟ್ಟಿ ಮತ್ತು ಚಿಮ್ಮಡ ಗ್ರಾಮಗಳ ಜನರಿಗೆ ಸೇವೆ ಒದಗಿಸಿ ಬರುವಷ್ಟರಲ್ಲಿ ಸಮಯದ ಕೊರತೆ ಉಂಟಾಗಿ ಕಚೇರಿಗೆ ಆಗಮಿಸುವುದು ವಿಳಂಬವಾಗುತ್ತಿದೆ ಎಂದರು.

ತಲಾಠಿ ನೀಡುವ ಪ್ರಮಾಣ ಪತ್ರಗಳು ಮತ್ತು ಮುಂದಿನ ಹಂತಕ್ಕೆ ಶಿಾರಸ್ಸು ಪತ್ರಗಳು ವಿಧ್ಯಾರ್ಥಿಗಳು ಸೇರಿದಂತೆ ಹಲವರ ಬದುಕಿಗೆ ಆಧಾರವಾಗಿವೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರಹವಾಸಿ, ನೌಕರಿಗೆ ಪ್ರಮಾಣ ಪತ್ರ, ಮೈನಾರಿಟಿ ಸರ್ಟಿಫಿಕೇಟ್, ಜೀವಂತ ಸದಸ್ಯರ ಪ್ರಮಾಣ ಪತ್ರ, ವಂಶವೃಕ್ಷ, ವಂಶಾವಳಿ, ಎನ್‌ಎ ಪ್ಲಾಟ್ ಉತಾರ ಮತ್ತು 94 ಸಿಸಿ ಸ್ಥಳ ಪರಿಶೀಲನೆ ಇನ್ನೂ ಇತ್ಯಾದಿ ಕಾಗದ ಪತ್ರಗಳಿಗೆ ತಲಾಟಿಯ ಪ್ರಾಥಮಿಕ ಹಂತದ ಕಾರ್ಯಗಳು ಮಹತ್ವವಾಗಿದ್ದು ಕೂಡಲೇ ತಲಾಟಿ ನೇಮಿಸಿ ಸಮಸ್ಯೆ ಬಗೆಹರಿಸಬೇಕು ಎಂದರು.

ಮಹಾಲಿಂಗ ಶಿವಣಗಿ, ಮಹಮದ್ ಐನಾಪುರ, ಕೃಷ್ಣ ಬಡಿಗೇರ, ಲಕ್ಕಪ್ಪ ದೇಸಾಯಿ, ತಿಪ್ಪಣ್ಣ ಬಂಡಿವಡ್ಡರ, ನಾಗಲಿಂಗ ಸುತಾರ,ತಿಪ್ಪಣ್ಣ ಪಾತ್ರೋಟ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net