

ಹುಬ್ಬಳ್ಳಿ : ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಇಲ್ಲಿನ ಹೊಸೂರಿನ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿರುವ ಅನುಸೂಯಾ ಮೆಳ್ಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದಲ್ಲಿ ಶನಿವಾರದಂದು ವಿದ್ಯಾರ್ಥಿಗಳಿಗಾಗಿ ಬಾಹ್ಯಾಕಾಶದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.
ಅಗಸ್ಱ ಅಂತಾರಾಷ್ಟ್ರೀಯ ಪ್ರತಿಷ್ಠಾನ ಮತ್ತು ಏಕಸ್ ಪ್ರತಿಷ್ಠಾನದ ಸಹಯೋಗದಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಮಾತನಾಡಿದ ಪ್ರತಿಷ್ಠಾನದ ವಲಯ ಮುಖ್ಯಸ್ಥ ಶಿವಾನಂದ ಚಲವಾದಿ, ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಇಂಜನಿಯರಿಂಗ್ ಮತ್ತು ಗಣಿತ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಅಳವಳಿಸಿಕೊಂಡು ಯಶಸ್ಸು ಗಳಿಸಬೇಕು ಎಂದು ಸಲಹೆ ನೀಡಿದರು.
ಧಾರವಾಡ ಜಿಲ್ಲೆಯ ಶೆರೇವಾಡ, ಬ್ಯಾಹಟ್ಟಿ, ಬಂಡಿವಾಡ, ಗಿರಿಯಾಲ, ತಾರಿಹಾಳ, ಕಣವಿಹೊನ್ನಾಪೂರ, ಹೊಸಗಬ್ಬೂರ, ಬೆಂಗೇರಿ ಮತ್ತು ಯರಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಪ್ರಭಂದ ಸ್ಪರ್ಧೆ ಆಯೋಜಿಸಲಾಗಿತ್ತು. ಭೂಗೋಳ ಮಾದರಿಗಳ ಪ್ರದರ್ಶನ ಏರ್ಪಡಿಸಿ, ಭಾರತಿಯ ಬಹ್ಯಾಕಾಶದ ಇತಿಹಾಸದ ಕುರಿತು ವಿವರಣೆ ನೀಡಲಾಯಿತು.
ಮೊದಲ ಮೂರು ಸ್ಥಾನ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಗಸ್ಱ ಅಂತರಾಷ್ಟ್ರೀಯ ಪ್ರತಿಷ್ಠಾನದ ಮಾರ್ಗದರ್ಶಕ ಶಿಕ್ಷಕರಾದ ಫಕ್ಕೀರೇಶ್ವರ ಮಡಿವಾಳರ, ಬಸವರಾಜ ಉಳ್ಳಿಗೇರಿ, ಸಿದ್ದಾರೂಢ ಕೋಟೂರು, ಜಂಗಳಿ ವೆಂಕಟೇಶ, ಭೀಮಪ್ಪ ಮಾಧನಬಾವಿ, ರಶ್ಮೀ ರೂಗಿ, ಚೈತ್ರಾ ಸುಣಗಾರ, ಗೌರಿ ಬಟ್ಟೂರು, ಪ್ರಶಾಂತ ಅಮೃತಯ್ಯನವರ ಮತ್ತು ಶ್ರೀದೇವಿ ಕೊಪ್ಪದ ಅವರು ವಿವಿಧ ಶಾಲೆಗಳಲ್ಲಿ ಕಾರ್ಯಕ್ರಮ ಅಯೋಜನೆ ಮಾಡಿದರು.
ಆಗಸ್ಱ ಪ್ರತಿಷ್ಠಾನದ ಪ್ರಾದೇಶಿಕ ಮುಖ್ಯಸ್ಥೆ ಡಾ, ಬಬಿತಾ ಎಂ.ಪಿ. ಹಾಗೂ ಇತರರು ಉಪಸ್ಥಿತರಿದ್ದರು.