ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ

12 HANUMASAGARA 01
ಹನುಮಸಾಗರ ಗ್ರಾಪಂ ಕಾರ್ಯಾಲಯದಲ್ಲಿ ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿ ಆನ್‌ಲೈನ್ ಮೂಲಕ ದಾಖಲಾತಿ ಆರಂಭದ ಕರ ಪತ್ರ ಬಿಡುಗಡೆ ಮಾಡಲಾಯಿತು. ಮುಖ್ಯ ಶಿಕ್ಷಕಿ ಭಾರತಿ ದೇಸಾಯಿ, ಗ್ರಾಪಂ ಸದಸ್ಯ ಭವಾನಿಸಾ ಪಾಟೀಲ್, ಶಿಕ್ಷಕಿ ಜ್ಯೋತಿ ಬಾಳಿಹಳ್ಳಮಠ, ಗ್ರಾಪಂ ಲೆಕ್ಕಿಗ ಮಹಾಂತಯ್ಯ ಕೋಮಾರಿ, ಮುಖಂಡರಾದ ಮೌಲಿ ಮೋಟಗಿ, ಕಳಕಪ್ಪ ನಿರ್ವಾಣಿ ಇತರರಿದ್ದರು.
Published on

ಹನುಮಸಾಗರ: ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿದ ವಿದ್ಯಾರ್ಥಿನಿಯರಿಗೆ ಮತ್ತೆ ಶಿಕ್ಷಣ ನೀಡುವ ಕಾರ್ಯವನ್ನು ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆ ಮಾಡುತ್ತಿದೆ ಎಂದು ಮುಖ್ಯ ಶಿಕ್ಷಕಿ ಭಾರತಿ ದೇಸಾಯಿ ಹೇಳಿದರು.

ಇಲ್ಲಿನ ಕಸ್ತೂರಬಾ ಗಾಂಧಿ ವಸತಿ ಶಾಲೆಯಿಂದ ಗ್ರಾಪಂ ಕಾರ್ಯಾಲಯದಲ್ಲಿ ಶೈಕ್ಷಣಿಕ ವರ್ಷದ ಆನ್‌ಲೈನ್ ಶಾಲಾ ದಾಖಲಾತಿ ಆಂದೋಲನ ಕುರಿತು ಜಾಗೃತಿ ಮೂಡಿಸಿ ಮಾತನಾಡಿದರು.

ಬಡತನ ರೇಖೆಗಿಂತ ಕೆಳಗಿರುವ 11 ರಿಂದ 14 ವರ್ಷದೊಳಗಿನ ವಿದ್ಯಾರ್ಥಿನಿಯರು, ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿ ದಾಖಲಾತಿಯನ್ನು ಪಡೆಯಲಾಗುತ್ತಿದೆ. ಶೈಕ್ಷಣಿಕ ವರ್ಷದಿಂದ ಆನ್‌ಲೈನ್ ಮೂಲಕ ದಾಖಲಾತಿ ಮಾಡಬೇಕಾಗಿದ್ದು, ಅರ್ಹ ವಿದ್ಯಾರ್ಥಿನಿಯರ ಪಾಲಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ದಾಖಲಾತಿ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net