ಬಂದೂಕು ತರಬೇತಿಗೆ ಅರ್ಜಿ ಸಲ್ಲಿಸಿ

Apply for firearms training
ಗೋಲಬಾವಿಯ ಕುರಿಗಾರರ ದೊಡ್ಡಿಗೆ ತೆರಳಿ ತೇರದಾಳ ಪಿಎಸ್‌ಐ ಅಪ್ಪಣ್ಣ ಐಗಳಿ ಬಂದೂಕು ತರಬೇತಿ ಪಡೆಯುವ ಕುರಿತು ಕುರಿಗಾಹಿಗಳಿಗೆ ಮಾಹಿತಿ ನೀಡಿದರು. ಸಂಜು ಹಾಡಕರ, ಕುರಿಗಾರರಾದ ಮಾದೇವ ಇಟಗೋಣಿ, ಶ್ರೀಶೈಲ ಮುಗಳಖೋಡ ಮತ್ತಿತರರಿದ್ದರು.
Published on

ತೇರದಾಳ: ಸರ್ಕಾರ ಕುರಿಗಾಹಿಗಳ ರಕ್ಷಣೆ ಉದ್ದೇಶದಿಂದ ಅವರಿಗೆ ಬಂದೂಕು ಬಳಕೆಯ ತರಬೇತಿ ನೀಡುತ್ತಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸ್ಥಳೀಯ ಠಾಣಾಧಿಕಾರಿ ಅಪ್ಪಣ್ಣ ಐಗಳಿ ಹೇಳಿದರು.

ತಾಲೂಕಿನ ಗೋಲಬಾವಿ ಹಾಗೂ ಹನಗಂಡಿ ಗ್ರಾಮದ ಕುರಿಗಾರರ ದೊಡ್ಡಿಗೆ ಶನಿವಾರ ತೆರಳಿ ಮಾಹಿತಿ ನೀಡಿದ ಅವರು, ಕುರಿಗಾಹಿಗಳು ತಮ್ಮ ಕುರಿಗಳೊಂದಿಗೆ ಜಮೀನುಗಳಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ. ರಾತ್ರಿ ವೇಳೆ ಕುರಿಗಳ ರಕ್ಷಣೆಗೆ ಹಗ್ಗದ ಬಲೆಯನ್ನು ತಾತ್ಕಾಲಿಕವಾಗಿ ಉಪಯೋಗಿಸಿರುತ್ತಾರೆ. ಕಳ್ಳಕಾಕರ ಹಾವಳಿ ತಡೆಯಲು ಅವರಿಗೆ ಬಂದೂಕು ತರಬೇತಿ ನೀಡಲಾಗುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸಿ ಎಂದರು. ಸಂಜು ಹಾಡಕರ, ಕುರಿಗಾರರಾದ ಮಾದೇವ ಇಟಗೋಣಿ, ಶ್ರೀಶೈಲ ಮುಗಳಖೋಡ, ರಾಘವೇಂದ್ರ ಔರಸಂಗ, ಶಿವಪ್ಪ ಅನ್ಯಾಗೊಳ, ಬಸವರಾಜ ಬೀಳಗಿ, ಬಾಳಪ್ಪ ಹನಗಂಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net