ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಮೈಸೂರು: ಕುವೆಂಪುನಗರ ನ್ಯೂಕಾಂತರಾಜೇ ಅರಸ್ ರಸ್ತೆಯಲ್ಲಿರುವ ಕುಂಬಾರರ ಸಾರ್ವಜನಿಕ ವಿದ್ಯಾರ್ಥಿನಿಲಯ ಟ್ರಸ್ಟ್‌ನಿಂದ 2025-26ನೇ ಸಾಲಿಗೆ ಕುಂಬಾರ ಜನಾಂಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಿಎಸ್ಸಿ, ಎಂಎಸ್ಸಿ, ಬಿಇ, ಎಂ.ಟೆಕ್, ಎಂಬಿಬಿಎಸ್ ಸೇರಿದಂತೆ ಇನ್ನಿತರ ತಾಂತ್ರಿಕ, ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿನಿಲಯದಲ್ಲಿ ಅರ್ಜಿ ನಮೂನೆ ಪಡೆದು ಕಾಲೇಜಿನ ವ್ಯಾಸಂಗ ದೃಢೀಕರಣ ಪತ್ರ, ಜಾತಿ ಪ್ರಮಾಣಪತ್ರ ಸೇರಿದಂತೆ ಇನ್ನಿತರ ದಾಖಲೆಗಳೊಂದಿಗೆ ಜುಲೈ 1ರೊಳಗೆ ಸಲ್ಲಿಸಬೇಕು. ಕಳೆದ ವರ್ಷದ ಹಳೇ ವಿದ್ಯಾರ್ಥಿಗಳು ಸಹ ಈ ವರ್ಷ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬೇಕಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಟಿ.ರಾಜು ಹೇಳಿಕೆಯಲ್ಲಿ ತಿಳಿಸಿದ್ದಾರೆ.