

ವಿಜಯವಾಣಿ ಸುದ್ದಿಜಾಲ ಧಾರವಾಡ
ದೀನ್‌ದಯಾಳ ಅಂತ್ಯೋದಯ ಯೋಜನೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ನಗರದ ಜಿಲ್ಲಾ ಆಸ್ಪತ್ರೆ ಆವರಣದ ಕಟ್ಟಡದಲ್ಲಿ ಕಿರು ಅಕ್ಕ ಕೆಫೆ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದೆ. ಇದನ್ನು ನಿರ್ವಹಿಸಲು ನಗರದ ಸ್ವಸಹಾಯ ಗುಂಪುಗಳಿAದ ಅರ್ಜಿ ಆಹ್ವಾನಿಸಲಾಗಿದೆ. ಗುಂಪುಗಳು ಕಡ್ಡಾಯವಾಗಿ ಡೇ ನಲ್ಮ್ ಯೋಜನೆಯ ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ರಚನೆಗೊಂಡು ಎಂಐಎಸ್ ಸಂಖ್ಯೆ ಹೊಂದಿರಬೇಕು. ಪಾಕ ಪರಿಣಿತಿ ಪ್ರಮಾಣಪತ್ರ ಹೊಂದಿರಬೇಕು. ಆಸಕ್ತರು ಅರ್ಜಿಯನ್ನು ಸಮುದಾಯ ಸಂಘಟನಾಽಕಾರಿ, ವಲಯ ಕಚೇರಿ ನಂ. 1ರ ಪಾಲಿಕೆ ಧಾರವಾಡ ಕಚೇರಿಗೆ ಏ. 1ರೊಳಗೆ ಸಲ್ಲಿಸಬೇಕು. ಮಾಹಿತಿಗೆ ವಲಯ ಕಚೇರಿ 1ನ್ನು ಸಂಪರ್ಕಿಸಬೇಕು ಎಂದು ಪಾಲಿಕೆ ಆಯುಕ್ತ ಡಾ. ರುದ್ರೇಶ ಗಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.