ಆಸಕ್ತ ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನ

image-365-1024x614
Published on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ೨೫ ಗ್ರಾಮ ಪಂಚಾಯತ್‌ಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ/ಗ್ರಾಮ ಒನ್ ಕೇಂದ್ರಗಳಿಗೆ ಆಸಕ್ತ ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಆಸಕ್ತ ಪ್ರಾಂಚೈಸಿಗಳು https://www.gramaonebls.com/users/registration ಲಿಂಕ್‌ನ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್ ಅಥವಾ ಕೋ-ಆರ್ಡಿನೇಟರ್, ಜಿಲ್ಲಾಧಿಕಾರಿಗಳ ಕಚೇರಿ, ಮಡಿಕೇರಿ, ಇವರನ್ನು ಸಂಪರ್ಕಿಸಬಹುದು.(೯೬೧೧೬೫೭೩೪೪/ ೯೯೦೦೩೮೫೩೦೧) ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸೋಮವಾರಪೇಟೆ ತಾಲೂಕಿನ ದೊಡ್ಡಮಳ್ತೆ, ಬೆಟ್ಟದಳ್ಳಿ, ಗರ್ವಾಲೆ, ನೆರುಗಳಲೆ, ತೋಳೂರು ಶೆಟ್ಟಳ್ಳಿ, ಹರದೂರು, ಕುಶಾಲನಗರ ತಾಲೂಕಿನ ಕೆದಕಲ್, ೭ನೇ ಹೊಸಕೋಟೆ, ನಾಕೂರು ಶಿರಂಗಾಲ, ಗುಡ್ಡೆಹೊಸೂರು, ವಿರಾಜಪೇಟೆ ತಾಲೂಕಿನ ಕಾಕೋಟು ಪರಂಬು, ಬೆಟೋಳಿ, ಅಮ್ಮತ್ತಿ, ಪೊನ್ನಂಪೇಟೆ ತಾಲೂಕಿನ ನಿಟ್ಟೂರು, ಬಲ್ಯಮಂಡೂರು, ಕೆ.ಬಾಡಗ, ಕುಟ್ಟ, ನಾಲ್ಕೇರಿ, ಬಿ.ಶೆಟ್ಟಿಗೇರಿ, ಕಿರುಗೂರು, ಪೊನ್ನಂಪೇಟೆ. ಮಡಿಕೇರಿ ತಾಲ್ಲೂಕಿನ ಮರಗೋಡು, ಹೊಸ್ಕೇರಿ, ಗಾಳಿಬೀಡು ಮತ್ತು ಕಡಗದಾಳು ಗ್ರಾಮ ಪಂಚಾಯಿತಿಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ/ಗ್ರಾಮ ಒನ್ ಕೇಂದ್ರಗಳ ತೆರೆಯಬೇಕಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net