ಶಾಲಾ ವಿಭಾಗ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Adarsha Shakshaka Prashasti Application
Published on

ಮೈಸೂರು: 2024-25ನೇ ಸಾಲಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದಲ್ಲಿ ಸಮನ್ವಯ ಶಿಕ್ಷಣ ಚಟುವಟಿಕೆಯ ಜಿಲ್ಲಾ ವ್ಯಾಪ್ತಿಯಲ್ಲಿ ಬ್ಲಾಕ್ ಹಂತದಲ್ಲಿ ಖಾಲಿ ಇರುವ ಬಿ.ಐ.ಇ.ಆರ್.ಟಿ. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗ ಹುದ್ದೆಗಳಿಗೆ ನೇರಗುತ್ತಿಗೆ ಮೂಲಕ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲು ಅರ್ಹ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.


ವಿಶೇಷ ಶಿಕ್ಷಣದಲ್ಲಿ ವಿಶೇಷ ಡಿ.ಇಡಿ ಹಾಗೂ ವಿಶೇಷ ಬಿ.ಇಡಿ ವಿದ್ಯಾರ್ಹತೆ ಹೊಂದಿ ಆರ್.ಸಿ.ಐ ನೋಂದಣಿಯಾಗಿರುವ ಅಭ್ಯರ್ಥಿಗಳು ಅಗತ್ಯ ದಾಖಲೆ, ಸ್ವವಿವರವನ್ನು ಜೂ.14ರ ಒಳಗೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಆಡಳಿತ) ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಾರ್ಯಾಲಯಕ್ಕೆ ತಲುಪಿಸಬೇಕು. ಮಾಹಿತಿಗಾಗಿ ದೂ. 0821-2496686, 9481066723, 9448999404 ಸಂಪರ್ಕಿಸಬಹುದು

ಜಿಲ್ಲಾ ಮಟ್ಟದ ಮುಂಗಾರು ಪೂರ್ವ ತಾಂತ್ರಿಕ ಕಾರ್ಯಾಗಾರ


ಮೈಸೂರು: ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಮುಂಗಾರು ಪೂರ್ವ ತಾಂತ್ರಿಕ ಕಾರ್ಯಾಗಾರವನ್ನು ಜೂ.12ರಂದು ಆಯೋಜಿಸಲಾಗಿದೆ.

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ ಮುಂಗಾರು ಹಂಗಾಮಿಗೆ ಸೂಕ್ತವಾದ ನೂತನ ತಂತ್ರಜ್ಞಾನ/ತಳಿ ಹಾಗೂ ಇತರ ಕೃಷಿ ಪರಿಕರಗಳ ಪ್ರದರ್ಶನ ಮತ್ತು ರಾಷ್ಟ್ರೀಯ ಬೀಜ ಯೋಜನೆಯಲ್ಲಿ ಲಭ್ಯವಿರುವ ಬೀಜಗಳ ಮಾರಾಟದ ವ್ಯವಸ್ಥೆ ಮಾಡಲಾಗಿದ್ದು, ಆಸಕ್ತ ರೈತರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net