

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕೃಷಿ ವಿಶ್ವವಿದ್ಯಾಲಯ ಆಯೋಜಿಸುವ ಕೃಷಿ ಮೇಳದಲ್ಲಿ ಕೊಡಮಾಡುವ `ಡಾ. ಚನ್ನವೀರ ಕಣವಿ' ಉತ್ತಮ ಕನ್ನಡ ಕೃಷಿ ಲೇಖನ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಚಲಿತ ನಿಯತಕಾಲಿಕೆಗಳಲ್ಲಿ 2024ರ ಆ. 1ರಿಂದ 2025ರ ಜು. 15ರೊಳಗೆ ಪ್ರಕಟವಾಗಿರುವ ಲೇಖನ ರೈತ ಸಮುದಾಯಕ್ಕೆ ಸೂರ್ತಿದಾಯಕ ಕೃಷಿ ವಿಚಾರಗಳನ್ನು ಒಳಗೊಂಡಿರಬೇಕು. ಲೇಖನದ ಝರಾಕ್ಸ್ ಪ್ರತಿಯನ್ನು ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಧಾರವಾಡ- 580 005 ಈ ವಿಳಾಸಕ್ಕೆ ಅಥವಾ de@uasd.in ಮೇಲ್‌ಗೆ ಆ. 25ರೊಳಗೆ ಕಳಿಸಬೇಕು ಎಂದು ಪ್ರಕಟಣೆ ತಿಳಿಸಿದೆ.