

ಮೈಸೂರು: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಒನ್ ಯೋಜನೆಯನ್ನು ಹಾಗೂ ಗ್ರಾಮೀಣ ಪ್ರದೇಶದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಒನ್ ಯೋಜನೆಯನ್ನು ವಿಸ್ತರಿಸುವ ಸಲುವಾಗಿ ಅರ್ಜಿಯನ್ನು ಅಹ್ವಾನಿಸಲಾಗಿದೆ.
ಯೋಜನೆಯನ್ನು ಫ್ರಾಂಚೈಸಿಗಳ ಮೂಲಕ ಅನುಷ್ಠಾಗೊಳಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಫೆ.01 ರ ಬೆಳಿಗ್ಗೆ 10 ಗಂಟೆಯಿoದ ಫೆ.15 ರ ರಾತ್ರಿ 11.59 ರವರೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಮೈಸೂರು (ಸಿ ಸಿ) 11, ಹೂಟಗಳ್ಳಿ (ಸಿ ಎಂ ಸಿ) 1, ನಂಜನಗೂಡು (ಟಿ ಎಂ ಸಿ) 1, ಬನ್ನೂರು (ಟಿ ಎಂ ಸಿ) 2, ಕೆ.ಆರ್.ನಗರ (ಟಿ ಎಂ ಸಿ) 3, ಪಿರಿಯಾಪಟ್ಟಣ (ಟಿ ಎಂ ಸಿ) 1, ಟಿ ನರಸೀಪುರ (ಟಿ ಎಂ ಸಿ) 2, ಹೆಗ್ಗಡದೇವನಕೋಟೆ (ಬಾಚೇಗೌಡನಹಳ್ಳಿ) 1, ಹುಣಸೂರು (ಸಿಂಗಮಾರನಹಳ್ಳಿ) 1, ಕೃಷ್ಣರಾಜನಗರ (ಹೊಸಕೋಟೆ) 1, ಕೃಷ್ಣರಾಜನಗರ (ಗಂಧನಹಳ್ಳಿ) 1, ಮೈಸೂರು (ಗೋಪಲಾಪುರ) 1, ಮೈಸೂರು (ಹಾರೋಹಳ್ಳಿ,ಮೆಲ್ಲಹಳ್ಳಿ) 1, ನಂಜನಗೂಡು (ಮರಳೂರು) 1, ನಂಜನಗೂಡು (ಹೆಗ್ಗಡಹಳ್ಳಿ) 1, ನಂಜನಗೂಡು (ಕಸುವಿನಹಳ್ಳಿ) 2, ನಂಜನಗೂಡು (ಹರಲವಾಡಿ) 1, ನಂಜನಗೂಡು (ಬಿಳಿಗೆರೆ) 1, ಸರಗೂರು (ಮನುಗನಹಳ್ಳಿ)1 ಇವುಗಳಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು https://www.karnatakaone.gov.in/Public/FranchiseeTerms ವೆಬ್‌ಸೈಟ್ ಮೂಲಕ ಕರ್ನಾಟಕ ಒನ್ ಫ್ರಾಂಚೈಸಿ ಕೇಂದ್ರಗಳ ಹಾಗೂ https://kal-mys.gramaone.karnataka.gov.in/ ವೆಬ್‌ಸೈಟ್ ಮೂಲಕ ಗ್ರಾಮ ಒನ್ ಕೇಂದ್ರಗಳ ಸ್ಥಾಪನೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲೆಯ ಅಪರ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.