ಮಹಿಳಾ ವಿವಿ ಕೋರ್ಸ್​ಗಳಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ

mm 6-8
Published on

ಅರ್ಜಿಗಳನ್ನು ವಿಶ್ವವಿದ್ಯಾನಿಲಯದ ವೆಬ್​ಸೈಟ್​ ಡಿಡಿಡಿ.ಠಡ್ಠಿ.ಚ್ಚ.ಜ್ಞಿ ಅಥವಾ ಯುಯುಸಿಎಂಎಸ್​ ಮೂಲಕ ಆನ್​ಲೈನ್​ನಲ್ಲಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ನಂತರ ಮುದ್ರಿತ ಪ್ರತಿಯನ್ನು ವಿಶ್ವವಿದ್ಯಾನಿಲಯದ ಆಯಾ ವಿಭಾಗಗಳ ಮುಖ್ಯಸ್ಥರ ಕಚೇರಿಗೆ ತಲುಪಿಸಬೇಕು ಎಂದು ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯಪುರ : ನಗರ ಹೊರ ವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎಂ.ಎ, ಬಿಲಿಬ್​ಎಸ್​.ಸಿ, ಎಂ.ಲಿಬ್​ಎಸ್​.ಸಿ, ಎಂಎಸ್​ಡಬ್ಲೂ, ಎಂ.ಕಾಂ, ಎಂ.ಎಸ್​.ಸಿ, ಎಂ.ಸಿ.ಎ ಹಾಗೂ ಎಂಬಿಎ ಸೇರಿದಂತೆ ವಿವಿಧ ಸ್ನಾತಕೋತ್ತರ, ಪಿಜಿ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್​ ಕೋರ್ಸ್​ಗಳಿಗೆ ಆಸಕ್ತ ವಿದ್ಯಾರ್ಥಿನಿಯರು ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆ. 25 ಕೊನೆಯ ದಿನವಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವಿವಿ ಕುಲಸಚಿವರಾದ ಶಂಕರಗೌಡ ಸೋಮನಾಳ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ ವಿಳಾಸಕ್ಕೆ ಸಂಪರ್ಕಿಸುವಂತೆ ಪ್ರಕಟಣೆಯು ತಿಳಿಸಿದೆ.

ಕಲಾ ನಿಕಾಯ: ಎಂ.ಎ& ಕನ್ನಡ, ಇಂಗ್ಲಿಷ, ಹಿಂದಿ, ಉರ್ದು, ಪ್ರದರ್ಶಕ ಕಲೆಗಳ ವಿಭಾಗ(ಎಂ.ಮ್ಯೂಜಿಕ್​&ಹಿಂದೂಸ್ತಾನಿ ಮ್ಯೂಜಿಕ್​), ಸಮಾಜ ವಿಜ್ಞಾನ ನಿಕಾಯ: ಎಂ.ಎ., ಸಮಾಜಶಾಸ, ರಾಜ್ಯಶಾಸ, ಅರ್ಥಶಾಸ, ಇತಿಹಾಸ, ಮಹಿಳಾ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ (ಒಂದು ವರ್ಷದ ಬಿ.ಲಿಬ್​ಎಸ್​.ಸಿ ಹಾಗೂ ಒಂದು ವರ್ಷದ ಎಂ.ಲಿಬ್​ಎಸ್​.ಸಿ) ಮತ್ತು ಮಾಸ್ಟರ್​ ಆಫ್​ ಸೋಶಿಯಲ್​ ವರ್ಕ್​ (ಎಂಎಸ್​ಡಬ್ಲೂ), ವಿಜ್ಞಾನ ನಿಕಾಯ: ಎಂ.ಎಸ್​.ಸಿ.& ಭೌತಶಾಸ, ರಸಾಯನಶಾಸ, ಗಣಿತ, ಸಸ್ಯಶಾಸ, ಪ್ರಾಣಿಶಾಸ, ಸಂಖ್ಯಾಶಾಸ, ಜೈವಿಕ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಆಹಾರ ಸಂಸ್ಕರಣೆ ಮತ್ತು ಪೌಷ್ಟಿಕ, ಕಂಪ್ಯೂಟರ್​ ಸೈನ್ಸ್​ ಮತ್ತು ಎಂಸಿಎ. ಶಿಕ್ಷಣ ನಿಕಾಯ: ಎಂ.ಈಡಿ, ಬಿಪಿಈಡಿ, ಎಂ.ಪಿ.ಈಡಿ, ವಾಣಿಜ್ಯ ನಿಕಾಯ: ಎಂ.ಕಾಂ. ಮತ್ತು ಎಂಬಿಎ,. ಮತ್ತು ವಿವಿಧ ವಿಷಯಗಳಲ್ಲಿ ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್​ ಕೋರ್ಸ್​ಗಳು.

ಮಹಿಳಾ ವಿವಿಯಲ್ಲಿ ಲಭ್ಯವಿರುವ ಕೋರ್ಸ್​ಗಳು:

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net