

ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ೨೦೨೨-೨೩ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಮತ್ತು ಸರ್ಟಿಫಿಕೆಟ್ ಕಾರ್ಯಕ್ರಮಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಜಗತ್ ತಿಮ್ಮಯ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿಶ್ವವಿದ್ಯಾನಿಲಯದ ಅಧೀನ ಸಂಸ್ಥೆಯಾದ ಎಫ್‌ಎಂಸಿ ಕಾಲೇಜಿನಲ್ಲಿ ಅರ್ಥಶಾಸ್ತ, ಇಂಗ್ಲೀಷ್, ಕೊಡವ ಭಾಷೆಯಲ್ಲಿ ಎಂ.ಎ, ಎಂಎಸ್ಸಿ(ಭೌತಶಾಸ್ತ), ಎಂ.ಕಾಂ, ಎಂ.ಬಿ.ಎ (ಟಿಟಿಎಂ) ಕಾರ್ಯಕ್ರಮಗಳಲ್ಲದೆ ಯೋಗ ವಿಜ್ಞಾನ ಮತ್ತು ಕೊಡವ ಭಾಷೆಯಲ್ಲಿ ಡಿಪ್ಲೋಮ, ಕೊಡವ ಡಿಪ್ಲೋಮ, ಕೊಡವ ಸರ್ಟಿಫಿಕೇಟ್ ಕಾರ್ಯಕ್ರಮಗಳನ್ನು ಅಧ್ಯಯನ ಮಾಡಬಹುದಾಗಿದೆ. ನುರಿತ ಬೋಧಕ ಸಿಬ್ಬಂದಿ, ಸುಸಜ್ಜಿತ ಗ್ರಂಥಾಲಯ, ಮತ್ತು ಪ್ರಯೋಗಾಲಯಗಳು, ಸೈಬರ್ ಲ್ಯಾಬ್, ಸಂಶೋಧನಾ ಪ್ರಯೋಗಾಲಯಗಳು, ಕ್ರೀಡಾ ಸಂಪನ್ಮೂಲಗಳು ಮತ್ತು ವ್ಯವಸ್ಥೆಗಳು ಇವೆ. ಪ್ರತ್ಯೇಕ ವಸತಿ ನಿಲಯಗಳ ಸೌಲಭ್ಯವೂ ಇದೆ ಎಂದು ತಿಳಿಸಿದರು.
ಎಂ.ಎ ಕೊಡವ ಸಂಯೋಜಕ ರವಿಶಂಕರ್ ಮಾತನಾಡಿ, ಆಸಕ್ತ ವಿದ್ಯಾರ್ಥಿಗಳು ಕಾಲೇಜಿನ ಜಾಲತಾಣ http://fmkmcc.edu.in ಮೂಲಕ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದು. ನ೧೨ ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದ್ದು, ವಿದ್ಯಾರ್ಥಿಗಳಿಗೆ ಗೊಂದಲಗಳಿದ್ದಲ್ಲಿ ನೇರವಾಗಿ ಕಾಲೇಜಿಗೆ ಭೇಟಿ ನೀಡಿ ಹೆಲ್ಪೆಡೆಸ್ಕ್ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ೮೦೮೮೨೭೨೬೮೯ ಅಥವಾ ೦೮೨೭೨-೨೯೮೨೨೨ ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯೋಗ ವಿಜ್ಞಾನ ಸಂಯೋಜಕ ಡಾ.ಮೇಜರ್ ರಾಘವ್.ಬಿ ಹಾಜರಿದ್ದರು.