

ಮಡಿಕೇರಿ:
ಕರ್ನಾಟಕ ವಿಧಾನಸಭೆಯ ಅರ್ಜಿಗಳ ಸಮಿತಿ ಗುರುವಾರ (ಮಾ.೧೪) ಮಡಿಕೇರಿಗೆ ಆಗಮಿಸಲಿದೆ. ಮಡಿಕೇರಿ ಜಿಲ್ಲಾಡಳಿತ ಭವನ ಮುಂದೆ ಕಟ್ಟಿರುವ ತಡೆಗೋಡೆ ನೆಲಸಮ ಮಾಡಿ ನವೀನ ತಂತ್ರಜ್ಞಾನದಲ್ಲಿ ನಿರ್ಮಾಣ ಮಾಡುವ ಕುರಿತು ಈ ಸಮಿತಿ ಸ್ಥಳ ಪರಿವೀಕ್ಷಣೆ ಮಾಡಲಿದೆ. ಬೆಳಗ್ಗೆ ೧೧ ಗಂಟೆಗೆ ಈ ಕಾರ್ಯಕ್ರಮ ನಿಗದಿಯಾಗಿದ್ದು, ಇದಕ್ಕೂ ಮೊದಲು ಬೆಳಗ್ಗೆ ೧೦.೩೦ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ. ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಅಧ್ಯಕ್ಷತೆಯ ಈ ಸಮಿತಿಯಲ್ಲಿ ವಿಧಾನಸಭೆ ಸದಸ್ಯರಾದ ಎಸ್. ಸುರೇಶ್ ಕುಮಾರ್, ಈ ತುಕಾರಾಮ್, ಎ. ಮಂಜು, ಸುರೇಶ ಬಾಬು ಸಿ.ಬಿ., ಬಿ. ಶಿವಣ್ಣ, ಎಸ್.ಟಿ. ಸೋಮಶೇಖರ, ಶಿವರಾಂ ಹೆಬ್ಬಾರ್, ಡಾ. ಹೆಚ್.ಡಿ. ರಂಗನಾಥ್, ಉಮನಾಥ್ ಎ. ಕೋಟ್ಯಾನ್, ಡಾ. ಮಂತರ್ ಗೌಡ, ಹೆಚ್.ಡಿ. ತಮ್ಮಯ್ಯ, ಪ್ರದೀಪ್ ಈಶ್ವರ್, ಎ.ಸಿ. ಶ್ರೀನಿವಾಸ, ಆನಂದ್ ಕೆ.ಎಸ್., ಮಹೇಂದ್ರ ಕಲ್ಲಪ್ಪ ತಮ್ಮಣ್ಣನವರ ಇರಲಿದ್ದಾರೆ.