4000 ಪೇದೆಗಳ ನೇಮಕ: 592 ಎಸ್​ಐ ಹುದ್ದೆ ತುಂಬಲು ಸರ್ಕಾರ ಸಮ್ಮತಿ

Police
Published on

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್​ಇನ್​ಸ್ಪೆಕ್ಟರ್ ಮತ್ತು ಪೇದೆಗಳ ನೇಮಕಾತಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ 2020-21ನೇ ಸಾಲಿನಲ್ಲಿ 592 ಪಿಎಸ್​ಐ/ಆರ್​ಎಸ್​ಐ ಮತ್ತು 4 ಸಾವಿರ ಸಿವಿಲ್/ಡಿಎಆರ್/ಕೆಎಸ್​ಆರ್​ಪಿ ಪೇದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.

ಕಮಿಷನರೇಟ್​ಗಳಾದ ಬೆಂಗಳೂರು ನಗರಕ್ಕೆ 74 ಪಿಎಸ್​ಐ, 1 ಆರ್​ಎಸ್​ಐ, ಮೈಸೂರು ನಗರಕ್ಕೆ 3 ಆರ್​ಎಸ್​ಐ, ಹುಬ್ಬಳ್ಳಿ-ಧಾರವಾಡ ನಗರಕ್ಕೆ 2 ಆರ್​ಎಸ್​ಐ, ಬೆಳಗಾವಿ ನಗರಕ್ಕೆ 19 ಪಿಎಸ್​ಐ, 3 ಆರ್​ಎಸ್​ಐ, ಕೇಂದ್ರ ವಲಯ (ಬೆಂಗಳೂರು) 92 ಪಿಎಸ್​ಐ, 2 ಆರ್​ಎಸ್​ಐ, ಪೂರ್ವವಲಯ (ದಾವಣಗೆರೆ) 40 ಪಿಎಸ್​ಐ, 10 ಆರ್​ಎಸ್​ಐ, ಪಶ್ವಿಮ ವಲಯ 39 ಪಿಎಸ್​ಐ, 2 ಆರ್​ಎಸ್​ಐ, ಉತ್ತರ ವಲಯ 74 ಪಿಎಸ್​ಐ, 10 ಆರ್​ಎಸ್​ಐ, ದಕ್ಷಿಣ ವಲಯ 93 ಪಿಎಸ್​ಐ, 7 ಆರ್​ಎಸ್​ಐ, ಕೆಎಸ್​ಐಎಸ್​ಎಫ್ 51 ಪಿಎಸ್​ಐ, ಸಿಐಡಿಗೆ 4 ಡಿಎಸ್​ಐ, ನಿಸ್ತಂತು 26 ಪಿಎಸ್​ಐ, ಕೆಎಸ್​ಆರ್​ಪಿಗೆ 40 ಆರ್​ಎಸ್​ಐಗಳ ನೇಮಕಾತಿ ನಡೆಯಲಿದೆ. ಅದೇ ರೀತಿ 2 ಸಾವಿರ ಸಿವಿಲ್ ಪೇದೆಗಳು, 1 ಸಾವಿರ ಎಪಿಸಿ ಮತ್ತು ಕೆಎಸ್​ಆರ್​ಪಿಗೆ 1 ಸಾವಿರ ಆರ್​ಪಿಸಿ ಹುದ್ದೆಗಳಿಗೆ 2020-21ರಲ್ಲಿ ಹಂತ ಹಂತವಾಗಿ ನೇಮಕಾತಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net