

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ 7 ಅಂಗನವಾಡಿ ಕೇಂದ್ರಗಳನ್ನು ಅಂಗನವಾಡಿ ಕಮ್ ಕ್ರಷ್ ಕೇಂದ್ರಗಳನ್ನು ಮಂಜೂರು ಮಾಡಿ ಅನುಷ್ಠಾನಗೊಳಿಸಲಾಗಿದೆ. ಪೊಲೀಸ್ ಹೆಡ್‌ಕ್ವಾಟರ್ಸ್, ಕೆಲಗೇರಿ- 3, ವಿಠ್ಠಲನಗರ, ವಾಲ್ಮೀಕಿ ಕ್ಷೇತ್ರ- 1, ಗಾರ್ಡನ್‌ಪೇಟ್, ರಾಜೀವಗಾಂಧಿನಗರ- 3 ಹಾಗೂ ಸೋನಿಯಾಗಾಂಧಿನಗರ- 3 ಅಂಗನವಾಡಿ ಕಮ್ ಕ್ರಷ್ ಕೇಂದ್ರಗಳನ್ನಾಗಿ ಮಾಡಲಾಗಿದೆ. ಈ ಕೇಂದ್ರಗಳಿಗೆ ಅಂಗನವಾಡಿ ಕಮ್ ಕ್ರಷ್ ಕಾರ್ಯಕರ್ತೆ ಹಾಗೂ ಅಂಗನವಾಡಿ ಕಮ್ ಕ್ರಷ್ ಸಹಾಯಕಿಯರನ್ನು ಗೌರವಧನ ಸೇವೆಯಡಿ ನೇಮಕಕ್ಕೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಫೆ. 1ರೊಳಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.