ಅಂಗನವಾಡಿ ಕಾರ್ಯಕರ್ತೆ, ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ

Job
Published on

ಹಾಸನ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಸನ ಜಿಲ್ಲೆಯ 8 ತಾಲೂಕುಗಳ ಸಮಗ್ರ ಶಿಶು ಅಭಿವೃಧ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳನ್ನು ಗೌರವ ಸೇವೆಯ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಮಹಿಳಾ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಹಾಸನ ತಾಲೂಕಿನಲ್ಲಿ ಕಾರ್ಯಕರ್ತೆಯರು-20, ಸಹಾಯಕಿಯರು-93, ಚನ್ನರಾಯಪಟ್ಟಣ ಕಾರ್ಯಕರ್ತೆಯರು-48, ಸಹಾಯಕಿಯರು-123, ಹೊಳೆನರಸೀಪುರ ಕಾರ್ಯಕರ್ತೆಯರು-33 ಸಹಾಯಕಿಯರು-70, ಬೇಲೂರು ಕಾರ್ಯಕರ್ತೆಯರು-11 ಸಹಾಯಕಿಯರು-91, ಸಕಲೇಶಪುರ ಕಾರ್ಯಕರ್ತೆಯರು-13, ಸಹಾಯಕಿಯರು-53, ಆಲೂರು ಕಾರ್ಯಕರ್ತೆಯರು-4 ಸಹಾಯಕಿಯರು-25, ಅರಸೀಕೆರೆ ಕಾರ್ಯಕರ್ತೆಯರು-51, ಸಹಾಯಕಿಯರು-138, ಅರಕಲಗೂಡು ಕಾರ್ಯಕರ್ತೆಯರು-22, ಸಹಾಯಕಿಯರು-62 ಹುದ್ದೆಗಳು ಖಾಲಿ ಇವೆ.

ಆಸಕ್ತ ಸ್ಥಳೀಯರು ಇಲಾಖೆಯ ವೆಬ್‌ಸೈಟ್ ವಿಳಾಸ ಮೂಲಕ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಅರ್ಜಿಯನ್ನು ಕೊನೆಯ ಏ. 9 ಸಂಜೆ 5.30 ರೊಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ ಹಾಗೂ ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಲು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net