

ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ಘಟಕದಿಂದ ಅವಳಿನಗರದಲ್ಲಿ ವಾಸಿಸುತ್ತಿರುವ ನಾಗರಿಕರಿಗೆ ನಾಗರಿಕ ಬಂದೂಕು ತರಬೇತಿ ಶಿಬಿರ ಆಯೋಜಿಸಲಾಗಿದೆ. ಆಸಕ್ತರು ಅಗತ್ಯ ದಾಖಲಾತಿಯೊಂದಿಗೆ ಹುಬ್ಬಳ್ಳಿಯ ನಗರ ಸಶಸ್ತ್ರ ಮೀಸಲು ಪಡೆ ಕಚೇರಿಯಲ್ಲಿ ಮೇ 8ರಿಂದ 15ರವರೆಗೆ ಅರ್ಜಿ ಪಡೆದು ಸಲ್ಲಿಸಬೇಕು ಎಂದು ಸಶಸ್ತ್ರ ಮೀಸಲು ಪಡೆಯ ಪ್ರಕಟಣೆ ತಿಳಿಸಿದೆ.