ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಜಿ ಆಹ್ವಾನ

application
Published on

2024/25ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ (PMKSY) ಯೋಜನೆ- ಸೂಕ್ಷ್ಮ ನೀರಾವರಿ (ಪ್ರತಿ ಹನಿಗೆ ಅಧಿಕ ಬೆಳೆ) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದ್ದು, ಆಸಕ್ತ ರೈತರು ಸಂಬoಧಿಸಿದ ತಾಲ್ಲೂಕಿನ ತೋಟಗಾರಿಕೆ ಕಛೇರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ.

ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಸಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರಿಗೆ (RD ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ) ಗರಿಷ್ಟ 2 ಹೆ. ಪ್ರದೇಶದವರೆಗೆ ಶೇ. 90 ರಷ್ಟು ಸಹಾಯಧನ ಹಾಗೂ ಇತರೆ ಗರಿಷ್ಟ 2 ಹೆ. ಪ್ರದೇಶ ಹೊಂದಿರುವ ರೈತರಿಗೆ ಶೇ. 55 ರಷ್ಟು ಸಹಾಯಧನ ನೀಡಲಾಗುವುದು.

ಎಲ್ಲಾ ವರ್ಗದ ರೈತರಿಗೆ 2 ಹೆ. ಮೇಲ್ಪಟ್ಟು ಗರಿಷ್ಟ 5 ಹೆ. ಪ್ರದೇಶದವರೆಗೆ ಶೇ. 45 ರಷ್ಟು ಸಹಾಯಧನ, ತರಕಾರಿ ಹಾಗೂ ವಾಣಿಜ್ಯ ಹೂ ಬೆಳೆಗಳಿಗೆ ಗರಿಷ್ಟ 2 ಹೆ. ಪ್ರದೇಶದವರೆಗೆ ಸಹಾಯಧನ, ಕಾಫಿ, ಟೀ ಹಾಗೂ ರಬ್ಬರ್ ಹೊರತುಪಡಿಸಿ ಎಲ್ಲಾ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಒದಗಿಸಲಾಗುವುದು.

ಫಲಾನುಭವಿಗಳು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಾಗಿರಬೇಕು ಅಥವಾ ತೋಟಗಾರಿಕೆ ಬೆಳೆ ಬೆಳೆಯುವ ಆಸಕ್ತಿ ಹೊಂದಿರಬೇಕು ಹಾಗೂ ಸೂಕ್ಷ್ಮ ನೀರಾವರಿ ಅಳವಡಿಸಿದ ನಂತರ ತೋಟಗಾರಿಕೆ ಬೆಳೆಗಳನ್ನೇ ಬೆಳೆಯಬೇಕು. ಫಲಾನುಭವಿಗಳು ನೀರಾವರಿ ಮೂಲವನ್ನು ಹೊಂದಿರಬೇಕು (ತನ್ನ ಸ್ವಂತ ನೀರಾವರಿ ಮೂಲ ಇಲ್ಲದಿದ್ದಲ್ಲಿ ಬೇರೆ ರೈತರನ್ನು ಈ ಸಂಬoಧ ಒಪ್ಪಿಗೆ ಪತ್ರ ಪಡೆದು ಸಲ್ಲಿಸಬೇಕು) ಹಾಗೂ ಸೂಕ್ಷ್ಮ ನೀರಾವರಿಗೆ ಯೋಗ್ಯವಿರುವಂತಹ ನೀರನ್ನು ಹೊಂದಿರಬೇಕು. ಸೂಕ್ಷ್ಮ ನೀರಾವರಿ ಘಟಕಗಳು ಕಾರ್ಯನಿರ್ವಹಿಸಲು ಅವಶ್ಯವಿರುವ ವಿದ್ಯುತ್ಛಕ್ತಿ ಅಥವಾ ಇತರೆ ಶಕ್ತಿ ಮೂಲಗಳನ್ನು ಹೊಂದಿರಬೇಕು. ಹನಿ/ತುಂತುರು ನೀರಾವರಿ ಘಟಕಗಳನ್ನು ಇಲಾಖಾ ಅನುಮೋದಿತ ಕಂಪನಿ/ ಸಂಸ್ಥೆಯವರಿoದ ಮಾತ್ರ ಅಳವಡಿಸಿಕೊಳ್ಳುವುದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರು ಹನಿ ನೀರಾವರಿಗೆ ಸಹಾಯಧನ ಪಡೆದು 07 ವರ್ಷ ಕಳೆದಿದ್ದಲ್ಲಿ ಅಂತಹ ರೈತರು ಸಹಾಯಧನಕ್ಕೆ  ಅರ್ಹರಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ/ದಾಖಲಾತಿಗಳ ವಿವರಗಳಿಗಾಗಿ ಮೈಸೂರಿನ (ಜಿಪಂ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ.ಸಂ: 0821-2430450, ಹೆಚ್.ಡಿ. ಕೋಟೆ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ(ಜಿಪಂ) ದೂ.ಸಂ:08228-255261, ಹುಣಸೂರು ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿಪಂ) ದೂ.ಸಂ:08222-252447, ಕೆ.ಆರ್. ನಗರ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ(ಜಿಪಂ) ದೂ.ಸಂ:08223-262791, ನಂಜನಗೂಡು ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ(ಜಿಪಂ) ದೂ.ಸಂ:08221-226201, ಪಿರಿಯಾಪಟ್ಟಣ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿಪಂ) ದೂ.ಸಂ: 08223-273535 ಹಾಗೂ ಟಿ.ನರಸೀಪುರ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿಪಂ) ದೂ.ಸಂ:08227-260086 ಅನ್ನು ಸಂಪರ್ಕಿಸಬಹುದೆoದು ಜಿಲ್ಲಾ ಪಂಚಾಯತ್‌ನ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net