ತರಕಾರಿ ಬೀಜ ವಿತರಣೆಗೆ ಅರ್ಜಿ ಆಹ್ವಾನ

05M.D.R.1 K.M.REKHA THOTAGARIKE SAHAKA NIRDESAKI
Published on

ಮದ್ದೂರು: ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತರಕಾರಿ ಬೀಜಗಳ (ಹೈಬ್ರಿಡ್ ಹಾಗೂ ಸುಧಾರಿತ ತಳಿ) ವಿತರಣೆ ಕಾರ್ಯಕ್ರಮದಡಿ ಸಣ್ಣ ಮತ್ತು ಅತಿಸಣ್ಣ ರೈತರು, ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರ ಅರ್ಹ ರೈತರಿಗೆ ಗರಿಷ್ಠ 2 ಸಾವಿರ ರೂ. ಮೊತ್ತದ ಬೀಜಗಳನ್ನು ವಿತರಿಸಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕಿ ನಿರ್ದೇಶಕಿ ಕೆ.ಎಂ.ರೇಖಾ ತಿಳಿಸಿದ್ದಾರೆ.

ಫಲಾನುಭವಿಗಳು ನೀರಾವರಿ ಸೌಲಭ್ಯ ಇರುವ ಹಾಗೂ ತರಕಾರಿ ಬೆಳೆಗಳನ್ನು ಬೆಳೆಯಲು ಆಸಕ್ತಿ ಹೊಂದಿರುವ ರೈತರಿಗೆ ಕಿಟ್‌ಗಳನ್ನು ತಾಲೂಕಿಗೆ ನೀಡಿರುವ ಗುರಿಗಳಿಗೆ ಅನುಗುಣವಾಗಿ ವಿತರಣೆ ಮಾಡಲಾಗುವುದು. ಆಸಕ್ತರಿಂದ ಅರ್ಜಿಯನ್ನು ಮದ್ದೂರಿನ ಹಿರಿಯ ಸಹಾಯಕ ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ಫೆ.9ರೊಳಗೆ ಸಲ್ಲಿಸಬೇಕು. ಮೊದಲ 100 ರೈತರಿಗೆ ಆದ್ಯತೆ ನೀಡಲಾಗುವುದು. ಗುರಿ ಮುಕ್ತಾಯವಾದ ನಂತರ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿಯೊಂದಿಗೆ ಆರ್‌ಟಿಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ, ಪರಿಶಿಷ್ಟ ಜಾತಿ, ಪಂಗಂಡವರು ಜಾತಿ ಪ್ರಮಾಣಪತ್ರ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಕಸಬಾ ಹೋಬಳಿ ಬಿ.ಕೆ.ಸಂತೋಷ್‌ಕುಮಾರ್ ಮೊ.9986773974, ಸಿ.ಎ.ಕೆರೆ ಹೋಬಳಿ ಎಸ್.ಶಿವಪ್ರಸಾದ್ ಮೊ.8867301929 ಹಾಗೂ ಆತಗೂರು ಹಾಗೂ ಕೊಪ್ಪ ಹೋಬಳಿ ಕೆ.ಎಂ.ನಿತಿನ್ ಮೊ.8217392184 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net