ವಿವಿಧ ಸಾಲ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

Application
Published on


ಮೈಸೂರು:
ಹನಿ ನೀರಾವರಿ ಅಳವಡಿಸಲು ಸಾಮಾನ್ಯ ವರ್ಗದವರಿಗೆ ಶೇಕಡ 75ರಷ್ಟು ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ರೈತರಿಗೆ ಶೇ.90ರಷ್ಟು ಧನಸಹಾಯ ನೀಡಬಹುದಾಗಿತ್ತು. ಗರಿಷ್ಠ ಐದು ಹೆಕ್ಟರ್ ಪ್ರದೇಶಕ್ಕೆ ಸಹಾಯಧನ ಪಡೆಯಲು ಅವಕಾಶವಿದೆ.

ತರಕಾರಿ ಮತ್ತು ಹೂವಿನ ಬೆಳೆಗೆ ಎರಡು ಹೆಕ್ಟರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುವುದು. ರಾಷ್ಟ್ರೀಯ ಖಾದ್ಯತೈಲ ಅಭಿಯಾನದಡಿ ತಾಳೆ ಬೆಳೆ ಬೇಸಾಯ ಕೈಗೊಳ್ಳುವ ರೈತರಿಗೆ ಉಚಿತವಾಗಿ ಗಿಡಗಳನ್ನು ನೀಡುವುದರ ಜೊತೆಗೆ ನಿರ್ವಹಣೆ ಹಾಗೂ ಅಂತರ ಬೆಳಗ್ಗೆ ನಾಲ್ಕು ವರ್ಷಗಳವರೆಗೆ ಪ್ರತ್ಯೇಕ ಸಹಾಯಧನ ಲಭ್ಯವಿರುತ್ತದೆ.

ಯಾಂತ್ರಿಕರಣ ಕಾರ್ಯಕ್ರಮದಲ್ಲಿ ವಿವಿಧ ಯಂತ್ರೋಪಕರಣಗಳಾದ ಬ್ರಷ್ ಕಟರ್, ಪವರ್ ವೀಡರ್ ಟೆಲಿಸ್ಕೋಪಿಕ್ ಪ್ರೂನರ್, ಚಾಪ್ ಕಟ್ಟರ್ ಇತ್ಯಾದಿ ಯಂತ್ರೋಪಕರಣ ಖರೀದಿಸಲು ಸಾಮಾನ್ಯ ರೈತರಿಗೆ ಶೇ. 40 ಸಹಾಯಧನ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಶೇ.50 ಸಹಾಯಧನ ನೀಡಲು ಅವಕಾಶವಿರುತ್ತದೆ.

ಆಸಕ್ತ ರೈತರು ಕೂಡಲೇ ಮೈಸೂರು ತಾಲೂಕಿನ ಕಸಬಾ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ.ಸಂ:9901387284, ವರುಣ ಹೋಬಳಿ ಸಹಾಯ ತೋಟಗಾರಿಕೆ ಅಧಿಕಾರಿ ಮೊ.ಸಂ: 8197392697, ಜಯಪುರ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ.ಸಂ:8904673607, ಇಲವಾಲ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ.ಸಂ:9986086262 ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್ ನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net