ಮುಳ್ಳೇರಿಯ: ಮಲಬಾರ್ ದೇವಸ್ವಂ ಮಂಡಳಿ ಅಡಿಯಲ್ಲಿ ಆದೂರು ಗ್ರಾಮದ ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎರಡು ಅಸಾಂಪ್ರದಾಯಿಕ ಟ್ರಸ್ಟಿಗಳ ಖಾಲಿ ಹುದ್ದೆ ನೇಮಕಾತಿಗೆ ದೇವಸ್ಥಾನದ ಪ್ರದೇಶದ ನಿವಾಸಿಗಳಾದ ಹಿಂದು ಧರ್ಮೀಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಡಿ.17ರಂದು ಸಂಜೆ 5 ಗಂಟೆಯೊಳಗೆ ಸಹಾಯಕ ಆಯುಕ್ತರು, ಮಲಬಾರ್ ದೇವಸ್ವಂ ಮಂಡಳಿ, ಕಾಸರಗೋಡು ವಿಭಾಗ, ನೀಲೇಶ್ವರ ಕಚೇರಿಗೆ ತಲುಪುವಂತೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ನಿಗದಿತ ಮಾದರಿಗಿರುವ ಅರ್ಜಿ ನಮೂನೆಯು ಮಲಬಾರ್ ದೇವಸ್ವಂ ಮಂಡಳಿ ವೆಬ್‌ಸೈಟ್, ನೀಲೇಶ್ವರದಲ್ಲಿರುವ ಸಹಾಯಕ ಆಯುಕ್ತರ ಕಚೇರಿಯಿಂದ ಉಚಿತವಾಗಿ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.