ಬೆಳೆ ವಿಮೆ ಯೋಜನೆಯಡಿ ರೈತರ ನೋಂದಾಣಿಗಾಗಿ ಅರ್ಜಿ ಆಹ್ವಾನ

Vijayavani-Featured-Image
Published on

ಬೆಂಗಳೂರು: ತೋಟಗಾರಿಕೆ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಮಂಗಾರು ಮತ್ತು ಹಿಂಗಾರು ಹಂಗಾಮುಗಳ ಮುರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಅನುಷ್ಟಾನಕ್ಕೆ ಯೋಜನೆವಾರು, ಬೆಳೆವಾರು ರೈತರ ವಿವರವನ್ನು ಆನ್‌ಲೈನ್ ಪೊರ್ಟಲ್​ನಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಆಧಾರಿತ ಬೆಳೆಗಳಾದ ಮಾವು ಮತ್ತು ದ್ರಾಕ್ಷಿ ಬೆಳೆಯ ಬೆಳೆ ವಿಮೆ ನೊಂದಣಿಗಾಗಿ ಆರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಬೆಳೆ ವಿಮೆ ಪಡೆಯಲಿಚ್ಚಿಸುವ ರೈತರು ಪಹಣಿ, ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ಸಂಖ್ಯೆ ನಕಲು ಪ್ರತಿ ಮತ್ತು ಸ್ವಯಂಘೋಷಿತ ಬೆಳೆ ವಿವರಗಳೊಂದಿಗೆ ರಾಷ್ಟ್ರೀಯ ಬ್ಯಾಂಕ್, ಸಾಮಾನ್ಯ ಸೇವಾ ಕೆಂದ್ರ/ ಗ್ರಾಮ ಒನ್‌ಗಳಲ್ಲಿ ವಿಮೆಗೆ ನೊಂದಾಯಿಸಕೊಳ್ಳಬಹುದು. ನೋಂದಣಿ, ವಿಮಾ ಮೊತ್ತ ಪಾವತಿಸಲು ಜು.31 ಕೊನೆಯ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತೋಟಗಾರಿಕೆ/ ಕೃಷಿ ಇಲಾಖೆ/ ಬ್ಯಾಂಕ್ ಅಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆಯ ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ವಿಮಾಸಂಸ್ಥೆಯ ಪ್ರತಿನಿಧಿ ರೂಪ್‌ಕಿಶೋರ್ ಮೊ: 9505872795, ಸಹಾಯವಾಣಿ: 1800-425-0505 ಸಂಪರ್ಕಿಸಬಹುದು. ಜತೆಗೆ ತೋಟಗಾರಿಕೆ ಉಪನಿರ್ದೇಶಕರು ದೂ: 080-22860640, ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಆನೇಕಲ್ ತಾಲೂಕು, ದೂ: 9845268382, ಉತ್ತರ/ಯಲಹಂಕ ತಾಲ್ಲೂಕು ದೂ: 9036043217, ದಕ್ಷಿಣ ತಾಲ್ಲೂಕು ದೂ: 9538953949 ಮತ್ತು ಪೂರ್ವ ತಾಲ್ಲೂಕು ದೂ: 9342255556 ಅನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net