

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ಪುರಸಭಾ ಕಾರ್ಯಲಯ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ಐ.ಇ.ಸಿ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವ-ಸಹಾಯ ಸಂಘಗಳು ಮತ್ತು ಎನ್.ಜಿ.ಓ ಸದಸ್ಯರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
2 ವರ್ಷಗಳ ಅವಧಿಗೆ ರಮ್ಮನಹಳ್ಳಿ ಪಟ್ಟಣ ಜೊತೆಗೆ ಪೂರ್ಣಾವಧಿಗೆ ಐ.ಇ.ಸಿ ಚಟುವಟಿಕೆ ಕೈಗೊಳ್ಳಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಲು NULM-Day/NRLM/NGO ಅಡಿಯಲ್ಲಿ ನೋಂದಾಯಿತ SHO/NGO ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದರ ಆಯ್ಕೆ ಪ್ರಕ್ರಿಯೆ ಮತ್ತು ಗೌರವಧನಕ್ಕೆ ಸಂಬoಧಿಸಿದ ವಿವರಗಳು www.hdkotetown.mrc.gov.in ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
NULM-Day/NRLM/NGO ಯೊಂದಿಗೆ ನೋಂದಾಯಿಸಿಕೊoಡ ಆಸಕ್ತಿ SHO/NGO ಸದಸ್ಯರು ತಮ್ಮ ಆಸಕ್ತಿಯ ಅಭಿವ್ಯಕ್ತಿಯನ್ನು NULM-Day/NRLM/NGO ಹಿಂಬರಹದೊoದಿಗೆ ಮೇಲೆ ತಿಳಿಸಲಾದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನಿಗದಿತ ನಮೂನೆಯನ್ನು ಸೆಪ್ಟೆಂಬರ್ 13 ರ ಸಂಜೆ 5.00 ಗಂಟೆಯ ಒಳಗಾಗಿ ಇ-ಮೇಲ್ itstaffulb. hdkote@yahoo.com ಐಡಿಗೆ ಕಳುಹಿಸಬಹುದು.