ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ

Kannada Flag
Published on

ಹುಬ್ಬಳ್ಳಿ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಇಲ್ಲಿನ ವಿಶ್ವಕನ್ನಡ ಬಳಗದಿಂದ ನ. 9ರಂದು ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕಲಾವಿದರು, ಸಾಹಿತಿಗಳು, ಸಮಾಜಸೇವೆ, ಶಿಕ್ಷಣ, ವೈದ್ಯಕೀಯ, ಕಾನೂನು, ಆಡಳಿತ, ಸಂಗೀತ, ರಂಗಭೂಮಿ, ನೃತ್ಯ, ಸಿನಿಮಾ, ಕಲೆ, ಪರಿಸರ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಎರಡು ಪಾಸ್​ಪೋರ್ಟ್ ಅಳತೆಯ ಫೋಟೊಗಳೊಂದಿಗೆ ಅಧ್ಯಕ್ಷರು, ವಿಶ್ವ ಕನ್ನಡ ಬಳಗ ಹುಬ್ಬಳ್ಳಿ, ಆಫೀಸ್ ನಂ. 10/2. ಮುಖ್ಯ ರಸ್ತೆ, ಕೆನರಾ ಸೋಡಾ ಫ್ಯಾಕ್ಟರಿ, ಬೆಂಗೇರಿ, ಹುಬ್ಬಳ್ಳಿ -23 ವಿಳಾಸಕ್ಕೆ ಸಲ್ಲಿಸುವಂತೆ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net