ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Published on

ಮಂಗಳೂರು: ದ್ರಾವಿಡ ಬ್ರಾಹ್ಮಣ ಅಸೋಸಿಯೇಶನ್, ಯುವ ವೇದಿಕೆ, ಗೋಕುಲ ಕಲ್ಯಾಣ ಮಂಟಪ ಅಶೋಕನಗರ ಮಂಗಳೂರು ಇವರ ಜಂಟಿ ಸಹಭಾಗಿತ್ವದಲ್ಲಿ 2024-25ನೇ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಕ್ಕಿಂತ ಅಧಿಕ ಅಂಕ ಗಳಿಸಿದ ಮಂಗಳೂರು ತಾಲೂಕಿನ ದ್ರಾವಿಡ ಬ್ರಾಹ್ಮಣ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುವುದು. ಅರ್ಹ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿಯ ಜೊತೆಗೆ ಇತ್ತೀಚಿನ ಭಾವಚಿತ್ರ ವಿದ್ಯಾ ಸಂಸ್ಥೆಯಿಂದ ದೃಢೀಕರಿಸಲ್ಪಟ್ಟ ಅಂಕಪಟ್ಟಿಯ ಒಂದು ಪ್ರತಿಯನ್ನು ಲಗತ್ತೀಕರಿಸಿ ಜುಲೈ 3ರ ಒಳಗೆ ಅಶೋಕ ನಗರದ ಗೋಕುಲ ಕಲ್ಯಾಣ ಮಂಟಪದ ಕಚೇರಿಯಲ್ಲಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ ಆನಂದ್ ನಾಜರ್ ಮನೆ 9945742657 ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net