

ಮಡಿಕೇರಿ: ಕೊಡಗು ಜಿಲ್ಲಾ ಬಂಟರ ಸಂಘದ ವತಿಯಿಂದ ೨೦೨೨-೨೩ನೇ ಸಾಲಿನ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ.ಜಗದೀಶ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೨೦೨೨-೨೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.೮೫ಕ್ಕಿಂತ ಹೆಚ್ಚು ಅಂಕಗಳಿಸಿದ, ಬಂಟ ಸಮುದಾಯಕ್ಕ ಸೇರಿದ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ ನಕಲು ಪ್ರತಿ, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು.
ಅರ್ಜಿ ಸಲ್ಲಿಸಲು ಜು.೫ ಕೊನೆಯ ದಿನವಾಗಿದೆ. ನಂತರದಲ್ಲಿ ಬರುವ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿಯನ್ನು ಕೊಡಗು ಜಿಲ್ಲಾ ಬಂಟರ ಸಂಘ ೨೫/೪, ಗಾಂಧಿ ಮೈದಾನ ಬಳಿ, ಮಡಿಕೇರಿ- ೫೭೧೨೦೧. ಮೊ.೭೨೦೪೫೨೦೨೭೨ ಇಲ್ಲಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ೯೮೮೦೮೬೯೪೯೦ ಮನೋಜ್ ಶೆಟ್ಟಿ, ೭೨೦೪೫೨೦೨೭೨ ಕಿಶೋರ್ ರೈ ಕತ್ತಲೆಕಾಡು ಇವರನ್ನು ಸಂಪರ್ಕಿಸಬಹುದು. ನಿಗದಿತ ಸಮಯದೊಳಗೆ ಬಂದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದೆಂದು ತಿಳಿಸಿದ್ದಾರೆ.