ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Deadline for purchasing FAQ sunflowers
Published on

ವಿಜಯಪುರ : ಜಿಲ್ಲಾ ನೂತನ ಛಾಯಾಗ್ರಾಹಕರ ಸಂದ ವತಿಯಿಂದ 2024&2025ನೇ ಸಾಲಿನಲ್ಲಿ ಎಸ್​ಎಸ್​ಎಲ್​ಸಿ ಮತ್ತು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಶೇ. 80 ಕ್ಕಿಂತ ಅಧಿಕ ಅಂಕ ಪಡೆದು ಉತ್ತೀರ್ಣಗೊಂಡ ಛಾಯಾಗ್ರಾಹಕರ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆ ವ್ಯಾಪ್ತಿಯ ಎಲ್ಲ ಛಾಯಾಗ್ರಾಹಕರು ತಮ್ಮ ಮಕ್ಕಳ ಪ್ರಸಕ್ತ ಸಾಲಿನ ಎಸ್​ಎಸ್​ಎಲ್​ಸಿ ಮತ್ತು ದ್ವೀತಿಯ ಪಿಯುಸಿ ಅಂಕಪಟ್ಟಿ, ಆಧಾರ್​ ಕಾರ್ಡ್​, ವಿದ್ಯಾರ್ಥಿಯ ಬ್ಯಾಂಕ್​ ಖಾತೆ ವಿವರ, ಎರಡು ಪಾಸಪೋರ್ಟ್​ ಅಳತೆಯ ಭಾವಚಿತ್ರದ ಜತೆಗೆ ಆ. 15 ರೊಳಗಾಗಿ ಅಧ್ಯಕ್ಷರು, ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂ ಅಂಗಡಿ ನಂ. 201, ಮೊದಲನೆ ಮಹಡಿ, ಎಸ್​.ಎಸ್​. ಕಾಂಪ್ಲೇಕ್ಸ್​, ಸಿದ್ದೇಶ್ವರ ದೇವಸ್ಥಾನದ ಹತ್ತಿರ, ಬಿಎಲ್​ಡಿಇ ರಸ್ತೆ ವಿಜಯಪುರ ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂದ ಅಧ್ಯಕ್ಷ ರಮೇಶ ಚವ್ಹಾಣ, ಕಾರ್ಯದರ್ಶಿ ಸತೀಶ ಕಲಾಲ ಹಾಗೂ ನಿರ್ದೇಶಕ ಸುನೀಲ ಗಲಗಲಿ ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net