

ಮೈಸೂರು:2024/25 ನೇ ಸಾಲಿಗೆ ಪಿರಿಯಾಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ ಕಲ್ಯಾಣ ಕಾರ್ಯಕ್ರಮದಡಿ ಶೇ.24.10, ಶೇ.7.25, ಹಾಗೂ ಶೇ.5 ಮನೆಗಳಿಗೆ ವೈಯಕ್ತಿಕ ಯುಜಿಡಿ ಸಂಪರ್ಕಕ್ಕೆ ಸಂಬoಧಿಸಿದoತೆ ವಾಸ್ತವಿಕ ಶುಲ್ಕದ ವೆಚ್ಚವನ್ನು ಫಲಾನುಭವಿಗಳ ಹೆಸರಿನ ವೆಚ್ಚವನ್ನು ಯುಜಿಡಿ ಅಥವಾ ನೀರಿನ ಸಂಪರ್ಕ ನೀಡುವ ಸಂಸ್ಥೆಗೆ ನೇರವಾಗಿ ಪಾವತಿಸಲು ಅರ್ಹ ಅರ್ಜಿದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಸೆ.09 ಕೊನೆ ದಿನಾಂಕ ವಾಗಿದ್ದು, ಆಸಕ್ತರು ನಿಗದಿತ ನಮೂನೆಯನ್ನು ಕಛೇರಿ ವೇಳೆಯಲ್ಲಿ ಪಡೆದು ಸೂಕ್ತ ದಾಖಲಾತಿಗಳೊಂಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ಪಿರಿಯಾಪಟ್ಟಣ ಪುರಸಭೆಯ ಮುಖ್ಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.