ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ

Application
Published on

ಮೈಸೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2023 ನೇ ಸಾಲಿನ ಹಿರಿಯ ಕ್ರೀಡಾಪಟುಗಳು/ತರಬೇತುದಾರರಾಗಿ ಸಾಧನೆ ಮಾಡಿರುವ ಕರ್ನಾಟಕದ ಹಿರಿಯ ಕ್ರೀಡಾಪಟುಗಳು/ತರಬೇತುದಾರರುಗಳಿಂದ ಜೀವಮಾನ ಸಾಧನೆ ಪ್ರಶಸ್ತಿಗಾಗಿ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

 ಖೋಖೋ, ಥ್ರೋಬಾಲ್, ಅಟ್ಯಾಪಾಟ್ಯಾ, ಮಲ್ಲಕಂಬ, ಯೋಗ, ಕುಸ್ತಿ ಮತ್ತು ಕಬಡ್ಡಿ ಕ್ರೀಡೆಗಳಿಗೆ ರಾಜ್ಯ, ರಾಷ್ಟ್ರ  ಮತ್ತು ಅಂತ ರಾಷ್ಟ್ರೀಯ  ಮಟ್ಟದ ಕ್ರೀಡೆಗಳಲ್ಲಿ ಪ್ರಶಸ್ತಿ ನೀಡುವ ವರ್ಷ ಸೇರಿದಂತೆ 5 ವರ್ಷಗಳ ಕ್ರೀಡಾ ಸಾಧನೆಯನ್ನು ಪರಿಗಣಿಸಲಾಗುವುದು. ಅಂಗೀಕೃತ ಕ್ರೀಡಾ ಫೆಡರೇಷನ್‌ಗಳಿಲ್ಲದ ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ ಕ್ರೀಡಾಪಟುಗಳ 5 ವರ್ಷದ ಸಾಧನೆಯನ್ನು ಪರಿಗಣಿಸಲಾಗುವುದು, ಭಿನ್ನ ಸಾಮರ್ಥ್ಯದ ಕ್ರೀಡಾಪಟುಗಳು ಕಳೆದ 5 ವರ್ಷಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರೀಯ  ಮತ್ತು ಅಂತ ರಾಷ್ಟ್ರೀಯ  ಮಟ್ಟದ ಕ್ರೀಡೆಗಳಲ್ಲಿ ಪ್ರಶಸ್ತಿ ನೀಡುವ ವರ್ಷ ಸೇರಿದಂತೆ 5 ವರ್ಷಗಳ ಕ್ರೀಡಾ ಸಾಧನೆಯನ್ನು ಪರಿಗಣಿಸಲಾಗುವುದು.

 ಈ ಹಿಂದೆ ಏಕಲವ್ಯ ಪ್ರಶಸ್ತಿಗಳನ್ನು ಪಡೆದವರು ಮತ್ತು ಕರ್ನಾಟಕ ನಿವಾಸಿಗಳಲ್ಲದ, ರಾಜ್ಯವನ್ನು ಪ್ರತಿನಿಧಿಸದೇ ಇರುವ ಕ್ರೀಡಾಪಟುಗಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ ಹಾಗೂ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬ ಬಗ್ಗೆ ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್ ನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.

 ಆಸಕ್ತರು ಸೇವಾ ಸಿಂಧು ವೆಬ್‌ಸೈಟ್ https://sevasindhuservices.karnataka.gov.in  ಮೂಲಕ ಸೆಪ್ಟೆಂಬರ್ 20 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.

 ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ನೋಟೀಸ್ ಬೋರ್ಡ್ ಅಥವಾ ದೂ.ಸಂ: 0821-2564179 ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಭಾಸ್ಕರ್ ನಾಯಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net