

ಮೈಸೂರು: ಜವಹಾರ ನವೋದಯ ವಿದ್ಯಾಲಯದ 2024-25 ನೇ ಸಾಲಿನ 9 ಮತ್ತು 11ನೇ ತರಗತಿ ಶೈಕ್ಷಣಿಕ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದ್ದು, www.navodaya.gov.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನಾಂಕವಾಗಿರುತ್ತದೆ.
2024ರ ಫೆಬ್ರವರಿ 10 ರಂದು ಪರೀಕ್ಷೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ www.navodaya.gov.in ಅಥವಾ ದೂ.ಸಂ: 0821-2970040 ಅನ್ನು ಸಂಪರ್ಕಿಸಬಹುದು ಎಂದು ಜವಹಾರ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.