

ಚಿಕ್ಕಮಗಳೂರು: ಜಿಲ್ಲೆಯ ಕಡೂರು ಪಟ್ಟಣದಲ್ಲಿರುವ ಹೆಸರಾಂತ ತಾಂತ್ರಿಕ ಶಿಕ್ಷಣ ಸಂಸ್ಥೆ ಜಿಟಿಟಿಸಿ(ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ) ಕಾಲೇಜಿನಲ್ಲಿ ೨೦೨೪-೨೫ನೇ ಶೈಕ್ಷಣಿಕ ವರ್ಷದಲ್ಲಿ ವಿಶಿಷ್ಟ ಉದಯೋನ್ಮುಖ ಡಿಪ್ಲಮೋ ಕೋರ್ಸ್ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಾಲೇಜು ಪ್ರಾಚಾರ್ಯ ಜೆ.ಕೆ.ಜಯಪ್ರಕಾಶ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನಲ್ಲಿ ನೂತನವಾಗಿ ಪ್ರಸಕ್ತ ಸಾಲಿನಿಂದ ಆರಂಭಿಸಿರುವ ಡಿಪ್ಲಮೋ ಇನ್ ಆಟೋಮೇಷಿನ್ ಅಂಡ್ ರೋಬೋಟಿಕ್ಸ್ ಮತ್ತು ಎಲೆಕ್ಟಿçಕಲ್ ಅಂಡ್ ಎಲೆಕ್ಟಾçನಿಕ್ಸ್ ಇಂಜಿನಿಯರಿAಗ್ ಕೋಸ್‌ಗಳನ್ನು ಆರಂಭಿಸಲಾಗಿದೆ. ಎಸ್‌ಎಸ್‌ಎಲ್‌ಸಿ, ಐಟಿಐ, ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಲ್ಪಾವಧಿಯಲ್ಲಿ ವೃತ್ತಿ ಜೀವನ ನಡೆಸಲು ಈ ಕೋರ್ಸ್ಗಳು ಬಹುಬೇಡಿಕೆಯಾಗಿದೆ ಎಂದರು.
ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತಿದ್ದು, ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಶೇ.೩೩ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ. ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ವಿದ್ಯಾಸಿರಿ ವಿದ್ಯಾರ್ಥಿವೇತನ ಸೌಲಭ್ಯವನ್ನು ಒದಗಿಸಲಾಗುವುದು. ಈ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಲು ಆ. ೩೧ ಕೊನೆಯ ದಿನವಾಗಿದೆ ಎಂದು ತಿಳಿಸಿದರು.
ಕಡೂರಿನ ಜಿಟಿಟಿಸಿ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಯಾವುದೇ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದ ಸಿಎಂಕೆಕೆವೈ ಅಡಿಯಲ್ಲಿ ಹಲವು ಉಚಿತ ಅಲ್ಪಾವಧಿ ಕೋರ್ಸ್ಗಳನ್ನು ಕಲ್ಪಿಸಲಾಗುವುದು. ಇದರಲ್ಲಿ ಬಹು ಬೇಡಿಕೆಯ ಕೋರ್ಸ್ಗಳೆಂದರೆ ಸಿಎನ್‌ಸಿ ಟ್ರೈನಿಂಗ್, ಇಂಜಿನಿಯರಿAಗ್ ಸಿಎಡಿ, ಎಲೆಕ್ಟಿçಕಲ್ ಟಿಕ್ನಿಷಿಯನ್, ಡಾಟಾ ಎಂಟ್ರಿ ಆಪರೇಟರ್, ಫಿಟ್ಟರ್, ಕನ್ವನ್ಷಲ್ ಮಿಲ್ಲಿಂಗ್, ಟರ್ನಿಂಗ್ ಅಂಡ್ ಗ್ರೆÊಂಡಿAಗ್ ಕೋರ್ಸ್ಗಳಾಗಿವೆ ಎಂದು ಮಾಹಿತಿ ನೀಡಿದರು.
ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ೧ ವರ್ಷದ ಟೂಲ್ ರೂಂ ಮೆಷಿನಿಸ್ಟ್ಗೆ ಉಚಿತವಾಗಿ ಸೇರಬಯಸುವವರಿಗೆ ವಿದ್ಯಾರ್ಥಿ ವೇತನ ಸೌಲಭ್ಯವನ್ನು ನೀಡಲಾಗುವುದು. ಜೊತೆಗೆ ಈ ಎಲ್ಲ ಉಚಿತ ಕೋರ್ಸ್ಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ವಿವರಿಸಿದರು.
ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗುವುದು. ಈ ಅವಕಾಶವನ್ನು ಜಿಲ್ಲೆಯ ಯುವಕ-ಯುವತಿಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹೆಚ್ಚಿನ ಮಾಹಿತಿಗೆ ಜಿಟಿಟಿಸಿ ಕಾಲೇಜು, ವೇದಾ ಪಂಪ್ ಹೌಸ್ ಹತ್ತಿರ, ರಾಷ್ಟಿçÃಯ ಹೆದ್ದಾರಿ-೨೦೬, ಬಿ.ಎಚ್ ರಸ್ತೆ, ಕಡೂರು-೫೭೭೫೪೮ ಹಾಗೂ ದೂರವಾಣಿ ಸಂಖ್ಯೆ-೦೮೨೬೭ ೨೯೮೦೫೧, ೯೧೪೧೬೩೦೩೨೦, ೯೯೮೦೩೪೪೪೪೧, ೯೭೪೩೮೭೧೬೪೫ನ್ನು ಸಂಪರ್ಕಿಸುವAತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಉಪನ್ಯಾಸಕ ಪ್ರಕಾಶ್ ಮಳವಳ್ಳಿ ಉಪಸ್ಥಿತರಿದ್ದರು.