

ಮಡಿಕೇರಿ: ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಅ.೧೬ ರಿಂದ ೨೪ ರವರೆಗೆ ನಗರದ ಗಾಂಧಿ ಮೈದಾವದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿತ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರು, ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಡಿಕೇರಿ ದಸರಾ ಸಾಂಸ್ಕತಿಕ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಾವಿದರು, ಕಲಾತಂಡಗಳು ಅರ್ಜಿ ನಮೂನೆಯನ್ನು ಚಿಜಞಡಿಜಚಿಚಿಡಿಚಿ.ಛಿ ವೆಬ್‌ಸೈಟ್‌ನಿಂದ ಪಡೆದುಕೊಂಡು ಸೆ.೨೬ ರೊಳಗಾಗಿ ಚಿಜಞಡಿಜಚಿಚಿಡಿಚಿ@ಚಿಟ.ಛಿ ಇಮೇಲ್‌ಗೆ ಮೇಲ್ ಮಾಡಬೇಕು. ಅಥವಾ ಮಡಿಕೇರಿ ದಸರಾ ಸಾಂಸ್ಕತಿಕ ಸಮಿತಿ ಕೇರಾಫ್ ಮಡಿಕೇರಿ ನಗರ ದಸರಾ ಸಮಿತಿ, ಮಡಿಕೇರಿ ನಗರಸಭಾ ಸಂಕೀರ್ಣ ಮಡಿಕೇರಿ- ೫೭೧೨೦೧ ಈ ಕಛೇರಿಗೆ ಸಲ್ಲಿಸಬೇಕಾಗಿದೆ.
ನಿಗಧಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಸುವವರು ನಿಗಧಿತ ಅರ್ಜಿ ನಮೂನೆಯಲ್ಲಿಯೇ ತಮ್ಮ ಮಾಹಿತಿ ನೀಡಬೇಕು. ಹೆಚ್ಚಿನ ಮಾಹಿತಿಗೆ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ತೆನ್ನಿರಾ ಮೈನಾ-ಸಂಪರ್ಕ ಸಂಖ್ಯೆ ೯೪೪೯೧೫೬೨೧೫, ಕುಡೆಕಲ್ ಸಂತೋಷ್ ೮೭೬೨೧೧೦೯೪೮ ಎಂದು ತಿಳಿಸಿದ್ದಾರೆ.