ನಾಗರಿಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ

Bajrang_dal_arms_training_Karnataka_17052022_1200x800
Published on

ಹೊಸಪೇಟೆ: ವಿಜಯನಗರ ಜಿಲ್ಲಾ ಪೊಲೀಸ್ ವತಿಯಿಂದ ನಾಗರೀಕ ಬಂದೂಕು ತರಬೇತಿಯನ್ನು ಹಮ್ಮಿಕೊಂಡಿದ್ದು, ಆಸಕ್ತರು ಆ.೧೫ರ ಒಳಗಾಗಿ ಸಮೀಪದ ಪೊಲೀಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಬಹುದು.


ಹೊಸಪೇಟೆ ಉಪ ವಿಭಾಗದ ನಾಗರಿಕರಿಗೆ ಆ.೨೧ ರಿಂದ ೨೭ರ ವರೆಗೆ ಹೊಸಪೇಟೆಯ ಡಾ. ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ, ಕೂಡ್ಲಿಗಿ ಮತ್ತು ಹರಪನಹಳ್ಳಿ ಉಪವಿಭಾಗದ ನಾಗರೀಕರಿಗೆ ಆ.೨೮ ರಿಂದ ಸೆ.೩ರ ವರೆಗೆ ಹಗರಿಬೊಮ್ಮನಹಳ್ಳಿ ಯ ಸರ್ಕಾರಿ ಕಾಲೇಜು ಮೈದಾನದಲ್ಲಿ ತರಬೇತಿ ನೀಡಲಾಗುತ್ತದೆ.

೨೧ ವರ್ಷದ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದಾಗಿದ್ದು, ಮೂರು ಪಾಸ್ ಫೋಟೋ, ಮತದಾರರ ಗುರುತಿನ ಚೀಟಿ ಸಹಿತ ಅರ್ಜಿ ಸಲ್ಲಿಸಬೇಕು. ತರಬೇತಿ ಅವಧಿಯಲ್ಲಿ ಕಡ್ಡಾಯ ಶೂ ಧರಿಸಬೇಕು. ಲುಂಗಿ, ಪಂಚೆ ಧರಿಸಲು ಅವಕಾಶವಿಲ್ಲ. ತರಬೇತಿಯ ಅಭ್ಯರ್ಥಿಗಳು ನಿಗದಿತ ಅರ್ಜಿ ಶುಲ್ಕ, ಮದ್ದುಗುಂಡುಗಳ ಶುಲ್ಕ ಭರಿಸಬೇಕು. ದೃಷ್ಟಿದೋಷ ಇರಬಾರದು, ಮಾನಸಿಕ ದೈಹಿಕವಾಗಿ ಉತ್ತಮವಾಗಿರಬೇಕು. ಸಣ್ಣ ನೋಟ್ ಪುಸ್ತಕ ತರಬೇಕು. ಜತೆಗೆ ತರಬೇತಿ ಮುಗಿದ ಬಳಿಕ ಪ್ರಮಾಣ ಪತ್ರ ನೀಡಲಾಗುತ್ತದೆ. ತರಬೇತಿ ಸಮಯದಲ್ಲಿ ಅಶಿಸ್ತು ಕಂಡು ಬಂದಲ್ಲಿ ತಕ್ಷಣ ವಜಾ ಮಾಡಲಾಗುತ್ತದೆ. ಅರ್ಜಿಯನ್ನು ಪುರಸ್ಕಾರ ಮತ್ತು ತಿರಸ್ಕಾರ ಅಧಿ ಕಾರ ಜಿಲ್ಲಾ ಪೊಲೀಸ್ ವರಿವಷ್ಠಾಧಿಕಾರ ಹೊಂದಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net