ಅಭಿನಯ ತರಬೇತಿಗೆ ಅರ್ಜಿ ಆಹ್ವಾನ

application
Published on

ಮೈಸೂರು: ಅದಮ್ಯ ರಂಗಶಾಲೆಯು 30 ದಿನಗಳ ಅವಧಿಯ ಅಭಿನಯ ತರಬೇತಿ ಮತ್ತು ಕಲಾತ್ಮಕ ಚಲನಚಿತ್ರ ತಯಾರಿ ಮತ್ತು ಚಿತ್ರೀಕರಣ ಶಿಬಿರವನ್ನು ಮೇ 27 ರಿಂದ ಪ್ರಾರಂಭಿಸಲಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಅಭಿನಯ ತರಬೇತಿ, ಧ್ವನಿ ಮುದ್ರಣ, ಮೇಕಪ್, ಸಂಕಲನ ಸೇರಿದಂತೆ ಸಿನಿಮಾ ಮಾಧ್ಯಮದ ಬೇರೆ ಬೇರೆ ಆಯಾಮಗಳ ಕುರಿತು ಪರಿಚಯಾತ್ಮಕ ಪ್ರಾಯೋಗಿಕ ತರಗತಿಗಳು ನಡೆಯಲಿವೆ. ನುರಿತ ನಿರ್ದೇಶಕರು ಮತ್ತು ಸಿನಿಮಾ ಕಲಾವಿದರು ತರಬೇತಿ ನೀಡಲಿದ್ದಾರೆ. ಭಾಗವಹಿಸುವ ಶಿಬಿರಾರ್ಥಿಗಳನ್ನೇ ತೊಡಗಿಸಿಕೊಡು ಕಲಾತ್ಮಕ ಸಿನಿಮಾ ಮಾಡುವ ಉದ್ದೇಶ ಇದೆ.

ಪ್ರತಿದಿನ ಸಂಜೆ 6-30 ರಿಂದ 9 ರವರೆಗೂ ತರಗತಿ ನಡೆಯಲಿದೆ. ಮೊದಲು ನೋಂದಣಿ ಮಾಡಿಕೊಂಡ 30 ಜನರಿಗೆ ಅವಕಾಶ. ವಯೋಮಿತಿ 16-50 ವರ್ಷ. ವಿವರಗಳಿಗೆ ಚಂದ್ರು ಮಂಡ್ಯ ( ಮೊ: 86601 03141) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net