

ಮೈಸೂರು: ಜವಾಹರ ನವೋದಯ ವಿದ್ಯಾಲಯದ 2025/26 ನೇ ಶೈಕ್ಷಣಿಕ ವರ್ಷಕ್ಕಾಗಿ 6ನೇ ತರಗತಿಗಾಗಿ ಪ್ರವೇಶ ಪರೀಕ್ಷೆಯ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ವಿದ್ಯಾರ್ಥಿಗಳು www.navodaya.gov.in ವೆಬ್‌ಸೈಟ್ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 16 ಕೊನೆಯ ದಿನಾಂಕವಾಗಿದ್ದು, ಪ್ರವೇಶ ಪರೀಕ್ಷೆಯು 18-01-2025 ರಂದು ನಡೆಯಲಿದೆ.
ಆಯ್ಕೆ ಬಯಸುವ ಅಭ್ಯರ್ಥಿಗಳು 2024-25ನೇ ಸಾಲಿನಲ್ಲಿ 5 ನೇ ತರಗತಿಯಲ್ಲಿ ಸರ್ಕಾರಿ/ಅನುದಾನಿತ/ಸರ್ಕಾರದ ಅನುಮತಿ/ಮಾನ್ಯತೆ ಪಡೆದಿರುವ ಶಾಲೆಯಲ್ಲಿ ಮತ್ತು ಮೈಸೂರು ಜಿಲ್ಲೆಯಲ್ಲಿ ಆಧ್ಯಯನ ಮಾಡುತ್ತಿರಬೇಕು, ದಿ.01-05-2013 ರಿಂದ ದಿ.31-07-2015 ರೊಳಗೆ ಜನಿಸಿರಬೇಕು ಮತ್ತು ಮೈಸೂರು ಜಿಲ್ಲೆಯ ನಿವಾಸಿಯಾಗಿರಬೇಕು.
ಅರ್ಜಿಯನ್ನು ಭರ್ತಿ ಮಾಡುವಾಗ 5ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯರಿಂದ ಪಡೆದ ಪ್ರಮಾಣ ಪತ್ರ, ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ, ಪಾಲಕ ಅಥವಾ ಪೋಷಕರ ಸಹಿ, ವಿದ್ಯಾರ್ಥಿಯ ಸಹಿಯನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಪಿಎಂ ಶ್ರೀ ಜವಾಹರ ನವೋದಯ ವಿದ್ಯಾಲಯದ ಅಧಿಕೃತ ವೆಬ್‌ಸೈಟ್ www.navodaya.gov.in ಮತ್ತು ದೂ.ಸಂ: 0821-2970040 ನ್ನು ಸಂಪರ್ಕಿಸಬಹುದು ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.