

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ದೇವಾಂಗ ಸಂಘವು ಪ್ರತಿಭಾ ಪುರಸ್ಕಾರಕ್ಕಾಗಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಗಳಿಸಿದವರು ಹಾಗೂ ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ನಿವಾಸಿಗಳು ಅರ್ಜಿ ಆಹ್ವಾನ ಸಲ್ಲಿಸಬಹುದು.
ಆಸಕ್ತ ವಿದ್ಯಾರ್ಥಿಗಳು ಅಂಕಪಟ್ಟಿ, ಟಿಸಿ ನಕಲು ಪ್ರತಿ, ಭಾವಚಿತ್ರ, ವಿಳಾಸ ಮತ್ತು ಮೋಬೈಲ್ ಸಂಖ್ಯೆಯೊಂದಿಗೆ ಅರ್ಜಿ ಭರ್ತಿ ಮಾಡಿ ಸಂಘದ ಗೌರವ ಕಾರ್ಯದರ್ಶಿ ಜ್ಞಾನೇಶ್ವರ ಚೋಳಿನ, ಜ್ಞಾನರ್ಪೂಣಂ, ಮನೆ ನಂ.44, 2ನೇ ಕ್ರಾಸ್ ಹೊಯ್ಸಳ ನಗರ, ಹಳಿಯಾಳ ರಸ್ತೆ, ಧಾರವಾಡ-580003 ವಿಳಾಸಕ್ಕೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.