ಅರ್ಜಿ ಆಹ್ವಾನ

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಆಥಿರ್ಕವಾಗಿ ಹಿಂದುಳಿದ ನಗರದ ಬ್ರಾಹ್ಮಣ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಸಲು ಇಲ್ಲಿನ ಪ್ರತಿಭಾ ಪ್ರತಿಷ್ಠಾನ ವತಿಯಿಂದ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪಿಯುಸಿ, ಪದವಿ, ಯಿಜಿ, ಪಿಜಿ, ಬಿಇ, ಎಂಬಿಬಿಎಸ್​ ಸೇರಿ ಇತರ ಕೋರ್ಸ್​ಗಳ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಗಳು ದಿಶಾ ಪ್ರಿಂಟರ್ಸ್​, ವನವಾಸಿ ಶ್ರೀರಾಮ ಮಂದಿ ಕಾಂಪ್ಲೆಕ್ಸ್​ನಲ್ಲಿ ಜೂ. 20ರಿಂದ ಜು. 13ರವರೆಗೆ ದೊರೆಯಲಿವೆ. ಅಗತ್ಯ ದಾಖಲೆಗಳೊಂದಿಗೆ ಜು. 16ರಂದು ಸಂಜೆ 4 ಗಂಟೆಗೆ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಸಂಯೋಜಕ ಪ್ರಹ್ಲಾದ ನರಸಾಪುರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net