ಅರ್ಜಿ ಆಹ್ವಾನ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ರಾಜ್ಯದ 270 ಸರ್ಕಾರಿ ಹಾಗೂ 192 ಅನುದಾನಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಆಗಸ್ಟ್​ನಲ್ಲಿ ಮೆರಿಟ್​ ಹಾಗೂ ಮೀಸಲಾತಿ ಆಧಾರಿತ ವಿವಿಧ ವೃತ್ತಿ, ಘಟಕಗಳಲ್ಲಿ ಕೈಗಾರಿಕಾ ತರಬೇತಿ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ವೃತ್ತಿಯ ಅನುಸಾರ ಎಸ್ಸೆಸ್ಸೆಲ್ಸಿ ಉತ್ತೀರ್ಣ, ಅನುತ್ತೀರ್ಣರಾದ, 8ನೇ ತರಗತಿಯಲ್ಲಿ ಉತ್ತೀರ್ಣರಾದ ಅರ್ಹ ಆಸಕ್ತರು ಸರ್ಕಾರಿ ಮತ್ತು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ ಎನ್​ಸಿವಿಟಿ ಸಂಯೋಜಿತ ಸಿಟಿಎಸ್​ ಯೋಜನೆಯಡಿ ಇಂಜಿನಿಯರಿಂಗ್​ ಹಾಗೂ ನಾನ್​ ಇಂಜಿನಿಯರಿಂಗ್​ ವೃತ್ತಿಗಳಿಗೆ ಮೇ 28ರೊಳಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೌಶಲಾಭಿವೃದ್ಧಿ ಕೇಂದ್ರ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net