

ಧಾರವಾಡ: ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಹು-ಧಾ ಮಹಿಳಾ ಮಂಡಳಗಳಿಗೆ ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹಿಳೆಯರು ವಿಷಯ ಕುರಿತು ರೂಪಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಮಹಿಳಾ ಮಂಡಳಗಳು ಅರ್ಜಿಯನ್ನು ಆಲೂರು ವೆಂಕಟರಾವ ಭವನದ ಟ್ರಸ್ಟ್ ಕಚೇರಿಯಲ್ಲಿ ಪಡೆದು ಅ. 24ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಟ್ರಸ್ಟ್ ಕಚೇರಿ ಸಂಪಕಿರ್ಸಬಹುದು ಎಂದು ಪ್ರಕಟಣೆ ತಿಳಿಸಿದೆ.