

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಂಗಳೂರು ಆಧಾರಿತ ಮಹಾಗುರು ಎಜುಕೇಶನಲ್ ಟ್ರಸ್ಟ್ ವತಿಯಿಂದ ಬಡ ಹಾಗೂ ಪ್ರತಿಭಾವಂತ ವಿದ್ಯಾಥಿರ್ಗಳಿಂದ ವಿದ್ಯಾಥಿರ್ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಯ 2023&24ರಲ್ಲಿ ದ್ವೀತಿಯ ಪಿಯುಸಿ ಉತ್ತೀರ್ಣರಾಗಿ ಪದವಿ, ಡಿಪ್ಲೋಮಾ ಸೇರ ಬಯಸುವವರು ಅರ್ಜಿ ಸಲ್ಲಿಸಬಹುದು. ಪ್ರಸ್ತುತ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥಿರ್ಗಳು ದ್ವೀತಿಯ ಪಿಯುಸಿಯಲ್ಲಿ ಶೇ.85, ಪದವಿಯಲ್ಲಿ ಕನಿಷ್ಠ ಶೇ. 60ರಷ್ಟು ಅಂಕ ಪಡೆದಿರಬೇಕು. ಹಿಂದಿನ ವರ್ಷ ಅಥವಾ ಸೆಮಿಸ್ಟರ್ನಲ್ಲಿ ಅನುತ್ತೀರ್ಣರಾಗಿರಬಾರದು. ಆಸಕ್ತ ವಿದ್ಯಾಥಿರ್ಗಳು mahagurutrust.com ವೆಬ್ಸೈಟ್ನಲ್ಲಿ ಜೂ. 15ರೊಳಗೆ ಅಜಿರ್ಸಬಹುದು. ಹೆಚ್ಚಿನ ಮಾಹಿತಿಗೆ ಮಹಾಗುರು ಎಜುಕೇಶನಲ್ ಟ್ರಸ್ಟ್ ಸಂಪಕಿರ್ಸಬಹುದು.