

ಚಿತ್ರದುರ್ಗ: ರಾಜ್ಯ ಅಲಕ್ಷಿತ ಸಮುದಾಯಗಳ ಮಹಾವೇದಿಕೆ ಹಾಗೂ ದೇವರಾಜ ಅರಸು ಜನಸೇವಾ ಪ್ರತಿಷ್ಠಾನ ವತಿಯಿಂದ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ.
ಎಸ್ಸೆಸ್ಸೆಲ್ಸಿಯಲ್ಲಿ ಶೇ.90, ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸೆ.10ರೊಳಗೆ ಅರ್ಜಿ ಸಲ್ಲಿಸಬಹುದು. ಟಿ.ತಿಪ್ಪೇಸ್ವಾಮಿ ಸಂಪಿಗೆ, ಅಧ್ಯಕ್ಷರು, ಅಲಕ್ಷಿತ ಸಮುದಾಯಗಳ ಮಹಾವೇದಿಕೆ, ಕನ್ನಡ ಸಂಪಿಗೆ ನಿಲಯ, ದಪೇದಾರ್ ನಾರಾಯಣಪ್ಪ ಬಡಾವಣೆ, 5ನೇ ತಿರುವು, ಸೈನಿಕ ಪಾರ್ಕ್ ಬಳಿ, ಚಿತ್ರದುರ್ಗ. ಇಲ್ಲಿಗೆ ಸಲ್ಲಿಸಬಹುದು.