ಪ್ರಸಾದ ನಿಲಯ ಉಚಿತ ಪ್ರವೇಶಕ್ಕೆ ಅರ್ಜಿ

WEB LOGO
Published on

ವಿಜಯಪುರ: ನಗರದ ಶ್ರೀ ಸಿದ್ಧೇಶ್ವರ ಉಚಿತ ಪ್ರಸಾದ ನಿಲಯದಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ಅವಧಿಗೆ ಪ್ರವೇಶಕ್ಕಾಗಿ ಬಡ ಪ್ರತಿಭಾವಂತ ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ನಿಲಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ಇಲ್ಲಿನ ಲಿಂಗದ ಗುಡಿ ರಸ್ತೆಯ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿನ ಸಿದ್ಧೇಶ್ವರ ಉಚಿತ ಪ್ರಸಾದ ನಿಲಯಕ್ಕೆ ಭೇಟಿ ನೀಡಿ ಅರ್ಜಿ ಪಡೆದು ಜೂ. 20 ರೊಳಗೆ ಭರ್ತಿ ಮಾಡಿ ಸಲ್ಲಿಸಬೇಕು. ಮಾಹಿತಿಗೆ ಮೊ. 9449376091, 9448441986 ಮತ್ತು 9611886266ಕ್ಕೆ ಸಂಪರ್ಕಿಸುವಂತೆ ಸಂಸ್ಥೆ ಅಧ್ಯಕ್ಷ ಗುರುಪಾದಯ್ಯ ಗಚ್ಚಿನಮಠ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net