ಮೈ ಭಾರತ್​ ಹೆಸರು ನೋಂದಣಿಗೆ ಅರ್ಜಿ

Trek to Srishaila from 12
Invitation to a poetry competition
Published on

ವಿಜಯಪುರ : ಯುವ ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ ಕಾರ್ಯಕ್ರಮವು ದೇಶದಾದ್ಯಾಂತ ಯುವಕರನ್ನು ಮೈ ಭಾರತ ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ನೊಂದಾಯಿಸಿಕೊಳ್ಳಲು ಆಹ್ವಾನಿಸಲಾಗಿದೆ.

ದೇಶವ್ಯಾಪಿ ತುರ್ತು ಪರಿಸ್ಥಿತಿಗಳು ಮತ್ತು ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರೀಯ ಕಾರಣಕ್ಕಾಗಿ ಮಹತ್ವಪೂರ್ಣ ಪಾತ್ರವಹಿಸಲು ಯುವ ನಾಗರಿಕರನ್ನು ಸಶಕ್ತಗೊಳಿಸುವ ಉದ್ದೇಶ ಹೊಂದಿದೆ. ಈ ಯೋಜನೆಯು ಉತ್ತಮ ತರಬೇತಿ ಪಡೆದ, ಸ್ವಂದಿಸುವ ಆತ್ಮಸ್ಥೆರ್ಯದಿಂದರುವ ಸ್ವಯಂಸೇವಕರ ದಳವನ್ನು ನಿರ್ಮಿಸುವ ಉದ್ದೇಶ ಜತೆಗೆ ನೈಸರ್ಗಿಕ ವಿಪತ್ತುಗಳು, ಅಪಘಾತಗಳು, ಸಾರ್ವಜನಿಕ ತುರ್ತು ಪರಿಸ್ಥಿಗಳು ಸೇರಿದಂತೆ ಮುಂತಾದ ಅನಿರೀತ ಸಂದರ್ಭಗಳಲ್ಲಿ ನಾಗರಿಕ ಆಡಳಿತವನ್ನು ಪೂರಕವಾಗಿರಲಿದೆ.

ಪ್ರಸ್ತುತ ಪರಿಸ್ಥಿತಿ ಮತ್ತು ಉದಯೋನ್ಮಖ ಸುರಕ್ಷತಾ ಚಿಂತನೆಗಳನ್ನು ಮನಗಂಡು, ಸಮುದಾಯ ಆಧಾರಿತ ಪ್ರತಿಕ್ರಿಯಾ ವ್ಯವಸ್ಥೆ ಸ್ಥಾಪಿಸುವ ಅಗತ್ಯತೆ ಹೆಚ್ಚಾಗಿದೆ. ನಾಗರಿಕ ರಕ್ಷಣಾ ಸ್ವಯಂಸೇವಕರು ಈ ೇತ್ರದಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಸ್ಥಳಿಯ ಅಧಿಕಾರಿಗಳಿಗೆ ವಿವಿಧ ಸೇವೆಗಳ ಮೂಲಕ ಬೆಂಬಲ ನೀಡುತ್ತಾರೆ. ಅದರಲ್ಲಿ ರಕ್ಷಣೆ ಮತ್ತು ಸ್ಥಳಾಂತರ ಕಾರ್ಯಚರಣೆಗಳು, ಪ್ರಾಥಮಿಕ ಚಿಕಿತ್ಸೆ ಮತ್ತು ತುರ್ತು ಆರೈಕೆ, ಸಂಚಾರ ನಿರ್ವಹಣೆ, ಜನಸಮೂಹ ನಿಯಂತ್ರಣ, ಸಾರ್ವಜನಿಕ ಭದ್ರತೆ, ವಿಪತ್ತು ಪ್ರತಿಕ್ರಿಯೆ ಮತ್ತು ಪುನಶ್ಚೇತನ ಕಾರ್ಯಗಳಲ್ಲಿ ಸಹಾಯ ಮಾಡುವುದು ಒಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net