ಕಾಸರಗೋಡು: ಮಲಬಾರು ದೇವಸ್ವಂ ಮಂಡಳಿ ಅಧೀನದಲ್ಲಿರುವ ಕಾಸರಗೋಡು ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ಪಾರಂಪರಿಕ ಟ್ರಸ್ಟಿಗಳ ನೇಮಕಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಮಂಜೇಶ್ವರ ತಾಲೂಕಿನ ಮುಗು ಗ್ರಾಮದ ಮುಗು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ 5, ಹೊಸದುರ್ಗ ತಾಲೂಕಿನ ಕಯ್ಯೂರು ಗ್ರಾಮದ ಆಲಂತಟ್ಟ ಶ್ರೀ ಮಹಾವಿಷ್ಣು ಕ್ಷೇತ್ರದ 5, ಕಾಸರಗೋಡು ಜಿಲ್ಲೆ, ಹೊಸದುರ್ಗ ತಾಲೂಕಿನ ನೀಲೇಶ್ವರ ಗ್ರಾಮದ ಪಳ್ಳಿಕ್ಕರ ಶ್ರೀ ಭಗವತಿ ಕ್ಷೇತ್ರದ 3 ಸಾಂಪ್ರಾದಾಯಿಕ ಟ್ರಸ್ಟಿಗಳ ಹುದ್ದೆಗಳಿಗೆ ದೇವಸ್ಥಾನದ ಸಮೀಪ ವಾಸವಾಗಿರುವ ಹಿಂದು ಧರ್ಮೀಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಫಾರ್ಮ್ ಮಲಬಾರು ದೇವಸ್ವಂ ಮಂಡಳಿ ವೆಬ್‌ಸೈಟ್, ಸಹಾಯಕ ಆಯುಕ್ತರ ಕಚೇರಿ, ನೀಲೇಶ್ವರದಿಂದ ಲಭಿಸುವುದು. ಭರ್ತಿ ಮಾಡಿದ ಅರ್ಜಿಗಳನ್ನು ಫೆ.15ರಂದು ಸಂಜೆ 5ರೊಳಗೆ ಮಲಬಾರು ದೇವಸ್ವಂ ಮಂಡಳಿ, ಕಾಸರಗೋಡು ವಿಭಾಗ ನೀಲೇಶ್ವರದ ಸಹಾಯಕ ಆಯುಕ್ತರ ಕಚೇರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.