

ನರಗುಂದ: ತಾಲೂಕಿನ ವಾಸನ ಗ್ರಾಮದ ಸರ್ಕಾರಿ ಆರ್‌ಎಂಎಸ್‌ಎ ಪ್ರೌಢ ಶಾಲೆಯಲ್ಲಿ ಖಾಲಿ ಇರುವ ಹಿಂದಿ ಹಾಗೂ ವಿಜ್ಞಾನ ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಿಂದಿ ವಿಷಯಕ್ಕೆ ಬಿಎ, ಬಿ.ಇಡಿ, ವಿಜ್ಞಾನ ವಿಷಯಕ್ಕೆ ಬಿಎಸ್‌ಸಿ, ಬಿ.ಇಡಿ ವಿದ್ಯಾರ್ಹತೆ ಹೊಂದಿರಬೇಕು.
ಅರ್ಹ ಅಭ್ಯರ್ಥಿಗಳು ಸೆ.10 ರೊಳಗಾಗಿ ನಿಗಧಿತ ಅರ್ಜಿ ಹಾಗೂ ಸೂಕ್ತ ದಾಖಲಾತಿಯೊಂದಿಗೆ ಶಾಲಾ ಮುಖ್ಯೋಪಾಧ್ಯಾಯರಿಗೆ ಖುದ್ದಾಗಿ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.