ಮೈಸೂರು: ನಗರದ ನ್ಯೂ ಕಾಂತರಾಜ ಅರಸು ರಸ್ತೆಯಲ್ಲಿರುವ (ಅಪೋಲೋ ಆಸ್ಪತ್ರೆ ಎದುರು) ಕುಂಬಾರರ ಸಾರ್ವಜನಿಕ ವಿದ್ಯಾರ್ಥಿನಿಲಯ ಪ್ರವೇಶಕ್ಕೆ 2024-25ನೇ ಸಾಲಿಗೆ ಕುಂಬಾರ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಊಟ ಮತ್ತು ವಸತಿ ಸೌಕರ್ಯ ಉಚಿತವಿದ್ದು, ಬಿಎಸ್ಸಿ, ಎಂಎಸ್ಸಿ, ಬಿ.ಇ, ಎಂ.ಟೆಕ್, ಎಂಬಿಬಿಎಸ್, ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯೊಂದಿಗೆ ಕಾಲೇಜು ವ್ಯಾಸಂಗದ ದೃಢೀಕರಣ, ಜಾತಿ ಪ್ರಮಾಣ ಪತ್ರ, ವ್ಯಾಸಂಗ ಮಾಡುತ್ತಿರುವ ಬಗ್ಗೆ ದಾಖಲಾತಿಯಾದ ಗುರುತಿನ ಚೀಟಿ, 2 ಭಾವಚಿತ್ರಗಳೊಂದಿಗೆ ಜು.15ರೊಗೆ ಸಲ್ಲಿಸಬೇಕು. ಅಲ್ಲದೆ, ಹಳೆಯ ವಿದ್ಯಾರ್ಥಿಗಳೂ ಸಹ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸತಕ್ಕದ್ದು ಎಂದು ಟ್ರಸ್ಟ್‌ನ ಕಾರ್ಯದರ್ಶಿ ಟಿ.ರಾಜು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ: 9611599514 ಸಂಪರ್ಕಿಸಬಹುದಾಗಿದೆ.