ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

Trek to Srishaila from 12
Invitation to a poetry competition
Published on

ವಿಜಯಪುರ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ/ ಆಂಗ್ಲ ಮಾಧ್ಯಮ ಮುಸ್ಲಿಂ ವಸತಿ ಶಾಲೆ ಹಾಗೂ ಡಾ. ಎಪಿಜೆ ಅಬ್ದುಲ್​ ಕಲಾಂ ವಸತಿ ಶಾಲೆಗಳ 2025&26ನೇ ಸಾಲಿನ ಶೈಕ್ಷಣಿಕ ವರ್ಷದ 6ನೇ ತರಗತಿ ಪ್ರವೇಶ ಪರೀೆಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಏ. 10 ರವರೆಗೆ ವಿಸ್ತರಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿ.ಪಂ. ರಸ್ತೆಯಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಚೇರಿ, ಮೌಲಾನಾ ಆರದ ಭವನ, ಕನಕದಾಸ ಬಡಾವಣೆ ತಾಲೂಕು ವಿಸ್ತರಾಣಾಧಿಕಾರಿಗಳು, ಉಪ ವಿಭಾಗ ವಿಜಯಪುರ ಮತ್ತು ಇಂಡಿ ಅವರನ್ನು ಹಾಗೂ ಅರಕೇರಿಯ ಡಾ. ಎಪಿಜೆ ಅಬ್ದುಲ್​ ಕಲಾಂ ಬಾಲಕಿಯರ ವಸತಿ ಶಾಲಯ ಪ್ರಾಚಾಯೆರ್ ರೇಖಾ ಬಾರ್ಕಿ (ಮೊ. 8971459683), ಸಿಂದಗಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಸಿದ್ದಪ್ಪ ಕಾರಿಮುಂಗಿ (ಮೊ. 9980952960), ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಚಡಚಣ ತಾಲೂಕಿನ ಹಾಲಹಳ್ಳಿಯ ಪ್ರಾಚಾರ್ಯ ಮಲ್ಲಿಕಾರ್ಜುನ ಹೆಬ್ಬಳ್ಳಿ (ಮೊ. 9620828185), ಸರ್ಕಾರಿ ಮುಸ್ಲಿಂ ವಸತಿ ಶಾಲೆ, ಅಫಜಲಪೂರ ಟಕ್ಕೆ ವಿಜಯಪುರದ ಪ್ರಾಚಾರ್ಯ ಸಿದ್ರಾಮ ಎಂಟೆತ್ತ (ಮೊ. 8310830407), ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಇಣಚಗಲ್​ ಮುದ್ದೇಬಿಹಾಳ ನಂ.1 ಪ್ರಾಚಾರ್ಯ ರಮೇಶ (ಮೊ. 9844493306), ಇಂಡಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ರವಿಚಂದ್ರ ಕಾಂಬಳೆ (ಮೊ. 9632454670) ಹಾಗೂ ಮುದ್ದೇಬಿಹಾಳ ನಂ.2 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಖೇಮು ರಾಠೋಡ (ಮೊ. 7259179398) ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net