ಅರ್ಜಿದಾರರು ದಳ್ಳಾಳಿಗಳಿಂದ ದೂರವಾಗಲಿ

Applicant, Broker, Alamela, Caste-Income Certificate, Genealogy, Aadhaar Card, Tehsildar, K. Vijayakumar, Revenue Department,
ಕೆ.ವಿಜಯಕುಮಾರ
Published on

ಆಲಮೇಲ: ಜಾತಿ-ಆದಾಯ ಪ್ರಮಾಣಪತ್ರ, ವಂಶಾವಳಿ ಹಾಗೂ ಆಧಾರ್ ಕಾರ್ಡ್ ಸೇರಿ ದಾಖಲೆ ಕೊಡಿಸುವುದಾಗಿ ದಳ್ಳಾಳಿಗಳು ಸಾರ್ವಜನಿಕರಿಂದ ಹೆಚ್ಚಿನ ಹಣ ಪಡೆದು ಅಧಿಕಾರಿಗಳಿಗೆ ತೊಂದರೆ ನೀಡುತ್ತಿರುವ ಕುರಿತು ಮಾಹಿತಿಗಳು ಬಂದಿದ್ದು, ಜನತೆ ಮಧ್ಯವರ್ತಿಗಳ ಮೊರೆ ಹೋಗಬಾರದು ಎಂದು ತಹಸೀಲ್ದಾರ್ ಕೆ.ವಿಜಯಕುಮಾರ ತಿಳಿಸಿದ್ದಾರೆ.

ವಿಜಯವಾಣಿ ಪತ್ರಿನಿಧಿಯೊಂದಿಗೆ ಸೋಮವಾರ ಅವರು ಮಾತನಾಡಿ, ದಳ್ಳಾಳಿಗಳ ಹಾವಳಿ ತಡೆಗೆ ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳು ಸಾರ್ವಜನಿಕರಿಗೆ ಸ್ನೇಹಜೀವಿಯಾಗಿ ಕೆಲಸ ನಿರ್ವಹಿಸಬೇಕು. ಅರ್ಜಿದಾರರು ನೇರವಾಗಿ ಗ್ರಾಮ ಒನ್ ಕೇಂದ್ರಗಳಿಂದ ಪಡೆಯಬೇಕು. ಸಂಬಂಧಿತ ಅಧಿಕಾರಿಗಳಿಗೆ ಜನತೆ ಭೇಟಿಯಾಗಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕು.

ಒಂದು ವೇಳೆ ದಲ್ಲಾಳಿಗಳ ಮೂಲಕ ಅರ್ಜಿಗಳನ್ನು ಕಳುಹಿಸಿದರೆ ಅಂಥವನ್ನು ರದ್ದು ಪಡಿಸಿ ಅರ್ಜಿದಾರರ ಮೇಲೆಯೇ ಕಾನೂನು ಕ್ರಮ ಜರುಗಿಸಲಾಗುವುದು. ಅಧಿಕಾರಿಗಳು ದಳ್ಳಾಳಿಗಳಿಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು.

ಈ ಕುರಿತು ಯಾರಾದರೂ ವಿನಾಕಾರಣ ತೊಂದರ ನೀಡಿದರೆ ಅಥವಾ ದಳ್ಳಾಳಿಗಳು ಕಚೇರಿ ಆವರಣದಲ್ಲಿ ಕಂಡು ಬಂದರೆ ಕೂಡಲೇ ಮೊಬೈಲ್ ಸಂಖ್ಯೆ 9980265830 ಗೆ ಸಂಪರ್ಕಿಸಬೇಕು ಎಂದು ಕೆ.ವಿಜಯಕುಮಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net