ಹುಲಿ ಮನುಷ್ಯರನ್ನು ತಿಂದರೆ ಚಪ್ಪಾಳೆ ತಟ್ಟೋದು ವನ್ಯಜೀವಿ ಸಂರಕ್ಷಣೆಯಲ್ಲ: ಹಾಗಾದರೆ, ವನ್ಯಜೀವಿ ಸಂರಕ್ಷಣೆ ಎಂದರೇನು?: ಡಾ. ಉಲ್ಲಾಸ ಕಾರಂತ್ ಪ್ರಶ್ನೆ

Ullas karanth
Published on

ಬೆಂಗಳೂರು ಹುಲಿ ಮನುಷ್ಯರನ್ನು ತಿಂದರೆ ಚಪ್ಪಾಳೆ ತಟ್ಟುವುದು, ಲಂಟಾನದಲ್ಲಿ ಆನೆ ನೋಡುವುದು ವನ್ಯಜೀವಿ ಸಂರಕ್ಷಣೆಯಲ್ಲ. ನಿಸರ್ಗ ಕಿತ್ತು ಕಿತಿನ್ನುವ ಮನಸ್ಥಿತಿ ಮತ್ತು ಅದರ ಬಳಕೆಯಲ್ಲಿ ಇಂದಿಷ್ಟು ಬದಲಾಯಿಸಿಕೊಂಡರೆ ಪರಿಹಾರ ಸಾಧ್ಯವಾಗಲಿದೆ ಎಂದು ವನ್ಯಜೀವಿ ತಜ್ಞ ಡಾ. ಕೆ. ಉಲ್ಲಾಸ ಕಾರಂತ್ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾನುವಾರ ಬಸವನಗುಡಿಯ ಬಿ.ಪಿ. ವಾಡಿಯಾ ಸಭಾಂಗನದಲ್ಲಿ ಅಂಕಿತ ಪುಸ್ತಕ ಪ್ರಕಟಿಸಿರುವ ಗಿರೀಶ್ ರಾವ್ ಹತ್ವಾರ್ ರಚಿತ ನಿರ್ಗಮನ-ಕಾದಂಬರಿ, ಸಾಲು-ಕವನ ಸಂಕಲನ ಮತ್ತು ಎಂ. ಆರ್. ದತ್ತಾತ್ರಿ ಅವರ ಸರ್ಪಭ್ರಮೆ ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ವನ್ಯಜೀವಿ ಸಂರಕ್ಷಣೆಯನ್ನು ವೈಜ್ಞಾನಿಕ ತಳಹದಿಯ ಮೇಲೆ ನೋಡಬೇಕಿದೆ. ವಿನಾಶ ಅಂಚಿಗೆ ತಲುಪಿದ ವನ್ಯಜೀವಿಗಳನ್ನು ಸಂರಕ್ಷಿಸುವುದು. ಇವುಗಳ ಸಂಖ್ಯೆ ಹೆಚ್ಚಿಸಿ ಪುನರುತ್ಥಾನ ಮಾಡುವುದು ಮಾನವ ಸಮಾಜದ ಗುರಿಯಾಗಬೇಕು ಎಂದರು.

ದೇಶದಲ್ಲಿ 1970ಕ್ಕೂ ಮೊದಲು ವನ್ಯಜೀವಿಗಳನ್ನು ತುಂಬಾ ಬೇಟೆಯಾಡಲಾಗುತ್ತಿತ್ತು. ವನ್ಯಜೀವಿ ಸಂರಕ್ಷಣೆ ಕಾನೂನು ಜಾರಿಗೊಳಿಸಿದ ನಂತರ ಇಂದಿಷ್ಟು ಸುಧಾರಣೆ ಕಂಡಿದೆ. ಇತ್ತೀಚಿನ ದಿನಗಳಲ್ಲಿ ಜನರ ಖಯಾಲಿ ಜಾಸ್ತಿಯಾಗುತ್ತಿದ್ದಂತೆ ಅರಿವು ಕಡಿಮೆಯಾಗುತ್ತಿದೆ. ಕಾಡಿನಲ್ಲಿ ನೈಸರ್ಗಿಕವಾಗಿ ಪ್ರಾಣಿಗಳು ಬದುಕುವುದು ವನ್ಯ ಸಂರಕ್ಷಣೆಯಾಗಿದೆ. ಅದರ ಬದಲು ಲಂಟಾನದಲ್ಲಿರುವ ಪ್ರಾಣಿಗಳನ್ನು ನೋಡಿ ಸಂತೋಷ ಪಡುವುದಲ್ಲ ಎಂದು ಮಾರ್ಮಿಕವಾಗಿ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net